ರಾಹುಲ್ ಗಾಂಧಿ ವಿಯೆಟ್ನಾಂಗೆ ಹಾರಿದ್ಯಾಕೆ, ಸೀಕ್ರೆಟ್ ರಿವೀಲ್ ಮಾಡಿದ ಕಾಂಗ್ರೆಸ್ ಸಂಸದ
ಒಂದೆಡೆ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಸಾವಿನ ದುಃಖ ಒಂದೆಡೆಯಾದರೆ ಇನ್ನೊಂದೆಡೆ ರಾಹುಲ್ ಗಾಂಧಿಗೆ ವಿದೇಶದಲ್ಲಿ ನ್ಯೂ ಇಯರ್ ಪಾರ್ಟಿ ಮೋಜು ಮಾಡುವ ಹುಮ್ಮಸ್ಸು ಎಂದು ಬಿಜೆಪಿ ಟೀಕೆ ಮಾಡಿದೆ. ಇದಕ್ಕೀಗ ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಉತ್ತರ ನೀಡಿದ್ದಾರೆ.
ರಾಹುಲ್ ಗಾಂಧಿ ಈ ಮೊದಲೇ ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ವಿಯೆಟ್ನಾಂಗೆ ತೆರಳಿದ್ದಾರೆ. ಡಾ ಮನಮೋಹನ್ ಸಿಂಗ್ ನಿಧನರಾದಾಗ ರಾಹುಲ್ ಗಾಂಧಿ ಕಣ್ಣೀರು ಹಾಕಿದ್ದು ಎಲ್ಲರೂ ನೋಡಿಲ್ಲವೇ ಎಂದು ಟ್ವೀಟ್ ಮುಖಾಂತರ ಬಿಜೆಪಿ ಟೀಕೆಗೆ ಉತ್ತರ ನೀಡಿದ್ದಾರೆ.