ಪ್ರಧಾನಿ ನರೇಂದ್ರ ಮೋದಿಯಿಂದ ಮೋಸದ ಬಂಡವಾಳಶಾಹಿ ನಡೆಯುತ್ತಿದ್ದರೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಅದೃಷ್ಟ ಎನ್‌ಡಿಎ ಸರಕಾರದಲ್ಲಿ ಖುಲಾಯಿಸಿದೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಅಮಿತ್ ಶಾ ಪುತ್ರ ಜಯ್ ಶಾ ಮಾಲೀಕತ್ವದ ಕಂಪೆನಿ ಹಲವು ವರ್ಷಗಳಿಂದ ನಷ್ಟದಲ್ಲಿದ್ದರೂ 2014ರಲ್ಲಿ 50 ಸಾವಿರ ಕೋಟಿ ರೂಪಾಯಿಗಳ ವಹಿವಾಟು 80 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ, ಇದೊಂದು ವಿಚಿತ್ರ ವಿಶ್ವವಾಗಿದೆ. ಇದೇ ಸ್ಟಾರ್ಟ್‌ಪ್ ಇಂಡಿಯಾ ಮೇಕ್ ಇನ್ ಇಂಡಿಯಾ ಆಗಿದೆ ಎಂದು ಲೇವಡಿ ಮಾಡಿದರು.
ಗುಜರಾತ್‌ನ ರಾಜ್ಯದ ಮೂರು ದಿನಗಳ ಪ್ರವಾಸಕ್ಕೆ ಆಗಮಿಸಿರುವ ರಾಹುಲ್ ಗಾಂಧಿ, ನಾ ಖಾವುಂಗಾ ನಾ ಖಾನೇ ದೂಂಗಾ ಎಂದು ಹೇಳಿದ್ದ ಪ್ರಧಾನಿ ಮೋದಿ ನಾನು ಪ್ರಧಾನಿಯಲ್ಲ ಚೌಕಿದಾರನಿದ್ದಂತೆ ಎಂದು ಹೇಳಿದ್ದರು. ಇದೀಗ ಚೌಕಿದಾರ್ ಎಲ್ಲಿ ಓಡಿ ಹೋಗಿದ್ದಾರೆ? ಇದು ಗುಜರಾತ್‌ನ ಸತ್ಯಕಥೆಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.