ಪುತ್ರಿಯ ಮೇಲೆ ರೇಪ್ ಎಸಗಲು ತಂದೆಗೆ ಸಹಕಾರ ನೀಡಿದ ತಾಯಿ

ಸೋಮವಾರ, 4 ಡಿಸೆಂಬರ್ 2023 (13:35 IST)
ತನ್ನ ತಂದೆ ಅಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ಪ್ರತಿನಿತ್ಯ ಅತ್ಯಾಚಾರವೆಸಗುತ್ತಿದ್ದ. ತಾಯಿ ಕೂಡಾ ತಂದೆಗೆ ಸಹಕಾರ ನೀಡುತ್ತಿದ್ದಳು. ಇದರಿಂದ ಬೇಸತ್ತು ಜಾಮನಗರ್‌ದಿಂದ ಅಹ್ಮದಾಬಾದ್‌ಗೆ ತೆರಳುವ ರೈಲಿನಲ್ಲಿ ಬಂದಿಳಿದಿರುವುದಾಗಿ ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
 
ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವೆಸಗುತ್ತಿದ್ದ ತಂದೆಯ ಕಪಿಮುಷ್ಠಿಯಿಂದ ಪಾರಾಗಲು ಚಹಾ ಅಂಗಡಿಯ ಮಾಲೀಕನ ನೆರವು ಕೇಳಿದ್ದ ಬಾಲಕಿಯ ಮೇಲೆ ಹೋಟೆಲ್ ಮಾಲೀಕನೇ ಅತ್ಯಾಚಾರವೆಸಗಿದ ಹೇಯ ಘಟನೆ ವರದಿಯಾಗಿದೆ.
 
ಹಲವು ವರ್ಷಗಳಿಂದ ತಂದೆ ಪ್ರತಿನಿತ್ಯ ಅತ್ಯಾಚಾರವೆಸಗುತ್ತಿದ್ದು ಆತನಿಂದ ಪಾರಾಗಲು ಚಹಾ ಅಂಗಡಿಯ ಮಾಲೀಕನ ನೆರವು ಕೇಳಿದ್ದೆ. ಇದನ್ನು ಸದುಪಯೋಗಪಡಿಸಿಕೊಂಡು ಆತನೂ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಅತ್ಯಾಚಾರಕ್ಕೊಳಗಾದ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.
 
ಪೊಲೀಸರು ಬಾಲಕಿಯನ್ನು ಮಕ್ಕಳ ಏಳಿಗೆಯನ್ನು ಬಯಸುವ ಎನ್‌ಜಿಓ ಸಂಸ್ಥೆಗೆ ಸೇರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಜಾಮನಗರ್‌ದಿಂದ ಮಾಲೇಗಾಂವ್‌ಗೆ ತೆರಳಿದ್ದ ಬಾಲಕಿಗೆ ಚಹಾ ಅಂಗಡಿಯವನ ಪರಿಚಯವಾಗುತ್ತದೆ. ಬಾಲಕಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿ, ನಂತರ ಅತ್ಯಾಚಾರವೆಸಗಿದ್ದಾನೆ. ಅತ್ಯಾಚಾರವೆಸಗಿದ ನಂತರ ಬಾಲಕಿಯನ್ನು ಗುಜರಾತ್‌ನ ಅಹ್ಮದಾಬಾದ್‌ಗೆ ತೆರಳುವ ರೈಲು ಹತ್ತಿಸಿ ಪರಾರಿಯಾಗಿದ್ದಾನೆ.
 
ಪೊಲೀಸರು ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದು, ಆರೋಪಿಗಳ ಬಂಧನಕ್ಕೆ ತಂಡವನ್ನು ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ