ಕಾಮುಕರಿಂದ ತಪ್ಪಿಸಿಕೊಳ್ಳಲು ವಿದೇಶಿ ಯುವತಿ ಮಾಡಿದ್ದೇನು ಗೊತ್ತಾ?

ಮಂಗಳವಾರ, 5 ಡಿಸೆಂಬರ್ 2023 (12:30 IST)
ಕಾಮುಕರಿಂದ ತಪ್ಪಿಸಿಕೊಳ್ಳಲು ಅವರ ಕೈಯಿಂದ ತಪ್ಪಿಸಿಕೊಂಡ ವಿದೇಶಿ ಯುವತಿ ನೆರೆದ ಜನತೆಯ ಸಹಾಯದಿಂದ ಬಚಾವ್ ಆಗುವಲ್ಲಿ ಯಶಸ್ವಿಯಾಗಿದ್ದಾಳೆ.  ವಿದೇಶಿ ಯುವತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.  
 
ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಮೂವರು ಕಾಮುಕರಿಂದ ತಪ್ಪಿಸಿಕೊಳ್ಳಲು ಅಮೆರಿಕದ ವಿದ್ಯಾರ್ಥಿನಿಯೊಬ್ಬಳು ಚಲಿಸುವ ಆಟೋರಿಕ್ಷಾದಿಂದ ಜಂಪ್ ಮಾಡಿ ಘಟನೆ ನಡೆದಿದೆ.

ಮಾಧ್ಯಮದ ವರದಿಗಳ ಪ್ರಕಾರ, ಈ ದುರ್ದೈವಿ ಯುವತಿ  ತಡರಾತ್ರಿ ತುಲಿಯಾಗಂಜ್‌ನಲ್ಲಿ ರಿಕ್ಷಾ ಹತ್ತಿದ್ದಳು. ಎಲ್ಲ ಪ್ರಯಾಣಿಕರು ವಿವಿಧ ಸ್ಥಳಗಳಲ್ಲಿ ವಾಹನದಿಂದ ಇಳಿದುಹೋದ ಬಳಿಕ ರಿಕ್ಷಾ ಚಾಲಕ ತನ್ನ ಇಬ್ಬರು ಸ್ನೇಹಿತರ ಜತೆಗೂಡಿ ಸುಮಾರು 20 ನಿಮಿಷಗಳ ಕಾಲ ಲೈಂಗಿಕ ದೌರ್ಜನ್ಯ ನಡೆಸಿದರು.
 
ನಾನು ಗಟ್ಟಿಯಾದ ಧ್ವನಿಯಲ್ಲಿ ಕೂಗಿಕೊಂಡಾಗ,ವಾಹನದಲ್ಲಿ ಸಂಗೀತದ ವಾಲ್ಯೂಮ್ ಹೆಚ್ಚಿಸಿದರು. ಆಟೋ ಕೈಸರ್‌ಬಾಗ್‌ನಲ್ಲಿ ಸ್ವಲ ನಿಧಾನವಾದಾಗ ಚಲಿಸುತ್ತಿದ್ದ ವಾಹನದಿಂದ ಹಾರಿದ ಯುವತಿ ಟೆಂಪೋದ ನಂಬರ್ ನೋಟ್ ಮಾಡಿಕೊಂಡು ಪೊಲೀಸರಿಗೆ ದೂರು ನೀಡಿದಳು.

ಪೊಲೀಸರು ಟೆಂಪೋ ಚಾಲಕ ವೀರು ಮತ್ತು ಅವನ ಸ್ನೇಹಿತ ರಾಜನ್ ಮತ್ತು ಅಯೂಷ್‌ನನ್ನು ಬಂಧಿಸಿದ್ದಾರೆ. ಈ ಮೂವರು ಆರೋಪಿಗಳನ್ನು ಗುರುತಿಸುವುದಕ್ಕಾಗಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿಯ ಎದುರು ಪೆರೇಡ್ ನಡೆಸಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ