ಸೇಡು ತೀರಿಸಿಕೊಳ್ಳಲು ರಾಖಿ ಕಟ್ಟಿದವಳನ್ನೇ ರೇಪ್ ಮಾಡ್ದ

ಮಂಗಳವಾರ, 28 ಮೇ 2019 (08:48 IST)
ಗುಜರಾತ್ : 19 ವರ್ಷದ ಯುವಕನೊಬ್ಬ ಸೇಡು ತೀರಿಸಿಕೊಳ್ಳಲು ತನಗೆ ರಾಖಿ ಕಟ್ಟುತ್ತಿದ್ದ ಯುವತಿ ಮೇಲೆ ಅತ್ಯಾಚಾರವೆಸಗಿ ಹಲ್ಲೆ ಮಾಡಿದ ಘಟನೆ ಗುಜರಾತಿನ ಅಹಮದಾಬಾದ್ ನಲ್ಲಿ ನಡೆದಿದೆ.




ಸಂತ್ರಸ್ತೆ ಆರೋಪಿ ಯುವಕನ ರಕ್ತ ಸಂಬಂಧಿಯಲ್ಲದಿದ್ದರೂ  ಆಕೆ ತನ್ನ  ಸಹೋದರ ಎಂದು ಭಾವಿಸಿ ಆರೋಪಿಗೆ ರಾಖಿ ಕಟ್ಟುತ್ತಿದ್ದಳಂತೆ. ಆರೋಪಿ ಹಾಗೂ ಪೀಡಿತೆ ಶಾಲಾ ದಿನಗಳಿಂದಲೂ ಸ್ನೇಹಿತರಾಗಿದ್ದರಂತೆ.


ಆದರೆ ಲವ್ ಬ್ರೇಕ್ ಅಪ್ ಆಗಿದ್ದರಿಂದ ಆರೋಪಿ ಕೆಲ ದಿನಗಳಿಂದ ಬೇಸರದಲ್ಲಿದ್ದ ಹಿನ್ನಲೆಯಲ್ಲಿ. ಇದನ್ನು ವಿಚಾರಿಸಲು ಸಂತ್ರಸ್ತೆ  ಮನೆಗೆ ಕರೆದಿದ್ದಳಂತೆ. ಆದರೆ ಮನೆಗೆ ಬಂದ ಆತ ಲವ್ ಬ್ರೇಕ್ ಅಪ್ ಗೆ ಸಂತ್ರಸ್ತೆ ಕಾರಣವೆಂದು ಶಂಕಿಸಿ ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಅತ್ಯಾಚಾರವೆಸಗಿ ಹಲ್ಲೆ ಮಾಡಿದ್ದಾನೆ. ಹೇಗೋ ಆತನಿಂದ ತಪ್ಪಿಸಿಕೊಂಡು ಠಾಣೆಗೆ ಬಂದ ಪೀಡಿತೆ ಪೊಲೀಸರಿಗೆ ದೂರು ನೀಡಿದ್ದಾಳೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ