ಸಚಿವ ರವಿಶಂಕರ್ ಪ್ರಸಾದ್ ಬಳಿಕ ಸಂಸದ ಶಶಿ ತರೂರ್ ಖಾತೆಯೂ ಬ್ಲಾಕ್ ಮಾಡಿದ ಟ್ವಿಟರ್

ಶನಿವಾರ, 26 ಜೂನ್ 2021 (10:24 IST)
ನವದೆಹಲಿ: ಟ್ವಿಟರ್ ಮತ್ತು ಭಾರತ ಸರ್ಕಾರದ ನಡುವಿನ ತಿಕ್ಕಾಟದ ನಡುವೆಯೇ ಇದೀಗ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವಿಟರ್ ಖಾತೆಗಳನ್ನು ಸಂಸ್ಥೆ ಬ್ಲಾಕ್ ಮಾಡಿದೆ.


ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಮೊದಲಿಗೆ ಸಚಿವ ರವಿಶಂಕರ್ ಪ್ರಸಾದ್ ಖಾತೆಯನ್ನು ಟ್ವಿಟರ್ ಬ್ಲಾಕ್ ಮಾಡಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಶಶಿ ತರೂರ್ ಖಾತೆಯೂ ಬ್ಲಾಕ್ ಆಗಿದೆ. ಕಾಪಿರೈಟ್ ಉಲ್ಲಂಘನೆ ನೆಪದಲ್ಲಿ ಇಬ್ಬರ ಖಾತೆಗಳನ್ನೂ ಟ್ವಿಟರ್ ಬ್ಲಾಕ್ ಮಾಡಿದೆ.

ಆದರೆ ರವಿಶಂಕರ್ ಪ್ರಸಾದ್ ಟ್ವಿಟರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಏನೇ ತಿಪ್ಪರಲಾಗ ಹಾಕಿದರೂ ಭಾರತದ ಹೊಸ ಐಟಿ ನಿಯಮಗಳಿಗೆ ಟ್ವಿಟರ್ ಕೂಡಾ ಬದ್ಧವಾಗಿರಬೇಕು ಎಂದಿದ್ದಾರೆ. ಇನ್ನೊಂದೆಡೆ, ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಸಂಸದೀಯ ಸಮಿತಿಯ ಸದಸ್ಯರಾಗಿರುವ ಶಶಿ ತರೂರ್ ಕೂಡಾ ಈ ಬಗ್ಗೆ ಟ್ವಿಟರ್ ನಿಂದ ವಿವರಣೆ ಪಡೆಯುವುದಾಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ