ಅಹ್ಮದಾಬಾದ್ ವಿಮಾನ ದುರಂತಕ್ಕೆ ಕಾರಣ ಬಯಲು: ಪೈಲೆಟ್ ಕೊನೆಯದಾಗಿ ಹೇಳಿದ್ದೇನು

Krishnaveni K

ಶನಿವಾರ, 12 ಜುಲೈ 2025 (11:06 IST)
ಅಹ್ಮದಾಬಾದ್: ಗುಜರಾತ್ ನ ಅಹ್ಮದಾಬಾದ್ ನಲ್ಲಿ 270 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದ ಏರ್ ಇಂಡಿಯಾ ವಿಮಾನ ಪತನಕ್ಕೆ ನಿಜ ಕಾರಣ ಈಗ ಬಯಲಾಗಿದೆ. ತನಿಖೆಯಲ್ಲಿ ಪೈಲೆಟ್ ಗಳ ನಡುವೆ ನಡೆದ ಕೊನೆಯ ಸಂಭಾಷಣೆ ಬಹಿರಂಗವಾಗಿದೆ.

ತನಿಖಾ ತಂಡದ 15 ಪುಟಗಳ ವರದಿ ಇದೀಗ ಬಹಿರಂಗಗೊಂಡಿದೆ. ಇದರಲ್ಲಿ ಕಾಕ್ ಪೀಟ್ ನಲ್ಲಿ ಪೈಲೆಟ್ ಗಳ ನಡುವೆ ನಡೆದ ಕೊನೆಯ ಸಂಭಾಷಣೆಯ ಧ್ವನಿ ಮುದ್ರಣದ ವಿವರವಿದೆ. ಈ ತನಿಖಾ ವರದಿಯಲ್ಲಿ ವಿಮಾನವು ವಾಯುಪ್ರದೇಶಕ್ಕೆ ತಲುಪಿದ ಕೆಲವೇ ಸೆಕೆಂಡುಗಳಲ್ಲಿ ಡ್ಯುಯೆಲ್ ಇಂಜಿನ್ ವಿಫಲವಾಗಿರುವುದೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.

ವಿಮಾನದ ತುದಿ 8 ಡಿಗ್ರಿ ಮೇಲಕ್ಕೆತ್ತಿದ ಸ್ಥಿತಿಯಲ್ಲಿತ್ತು. ಆದರೆ ಆಗ ಇಂಧನ ಪೂರೈಕೆಯಾಗಲಿಲ್ಲ. ಇದೇ ಕಾರಣಕ್ಕೆ ಅಪಘಾತ ಸಂಭವಿಸಿತು ಎನ್ನಲಾಗಿದೆ. ಇಂಧನ ಪೂರೈಕೆ ಸ್ಥಗಿತಗೊಳ್ಳಲು ಪೈಲೆಟ್ ಗಳ ನಡುವೆ ನಡೆದ ಗೊಂದಲ ಕಾರಣ ಎನ್ನಲಾಗಿದೆ.

ಪೈಲೆಟ್ ಗಳ ಕೊನೆಯ ಸಂಭಾಷಣೆ ದಾಖಲಾಗಿದ್ದು, ಇದರಲ್ಲಿ ಒಬ್ಬ ಪೈಲೆಟ್ ನೀನ್ಯಾಕೆ ಇಂಧನ ಆಫ್ ಮಾಡಿದೆ ಎಂದು ಪ್ರಶ್ನೆ ಮಾಡುತ್ತಾರೆ. ಇನ್ನೊಬ್ಬ ಪೈಲೆಟ್ ಮಾಡಿಲ್ಲ ಎನ್ನುತ್ತಾರೆ. ಹೀಗಾಗಿ ಪೈಲೆಟ್ ಗಳ ಗೊಂದಲಗಳಿಂದಾಗಿಯೇ ಇಂಧನ ಪೂರೈಕೆ ಸ್ಥಗಿತವಾಗಿದೆ. ಇದರಿಂದಾಗಿಯೇ ಅಪಘಾತ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದ ಅಂಶಗಳಾಗಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ