ನವದೆಹಲಿ : ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ವಿಶೇಷವಾಗಿ ರೂಪಿಸಲಾಗಿರುವ 1, 2, 5, 10 ಮತ್ತು 20 ರು. ಮುಖಬೆಲೆಯ ನಾಣ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಇಲ್ಲಿ ಬಿಡುಗಡೆ ಮಾಡಿದರು.
ನಾಣ್ಯದ ಮೇಲೆ ಆಜಾದಿ ಕಾ ಅಮೃತ ಮಹೋತ್ಸವ ಎಂಬ ಡಿಸೈನ್ ರೂಪಿಸಲಾಗಿದೆ. ಈ ನಾಣ್ಯಗಳನ್ನು ಅಂಧರು ಕೂಡಾ ಸುಲಭವಾಗಿ ಗುರುತಿಸುವ ರೀತಿಯಲ್ಲಿ ತಯಾರಿಸಲಾಗಿದೆ.
ಇವು ಸ್ಮರಣಾರ್ಥ ನಾಣ್ಯಗಳಲ್ಲ. ಚಲಾವಣೆಗೆಂದೇ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ನಾಣ್ಯ ಬಿಡುಗಡೆ ಮಾಡಿ ಮಾತನಾಡಿದ ಮೋದಿ ಹೊಸ ಸರಣಿಯ ನಾಣ್ಯಗಳು ಜನರಿಗೆ ಅಮೃತ ಕಾಲದ ಗುರಿಗಳನ್ನ ನೆನಪಿಸುವುದರ ಜೊತೆಗೆ ದೇಶದ ಅಭಿವೃದ್ಧಿ ದಿಕ್ಕಿನಲ್ಲಿ ಮಾಡಬೇಕಾದ ಕೆಲಸಗಳ ಬಗ್ಗೆ ಉತ್ತೇಜಿಸಲಿದೆ ಎಂದು ಹೇಳಿದರು.
ಇದರ ನಡುವೆಯೇ ಎಕ್ಸಿಸ್ ಬ್ಯಾಂಕ್ ಹಾಗೂ ಎಚ್ಡಿಎಫ್ಸಿ ಬ್ಯಾಂಕ್ಗಳು ತಮ್ಮ ಆಯ್ದ ಶಾಖೆಗಳಲ್ಲಿ ನಾಣ್ಯಗಳನ್ನು ಚಲಾವಣೆಗಾಗಿ ವಿತರಿಸಲಿವೆ.