ಕೇಂದ್ರದಿಂದ ರಾಜ್ಯಗಳ ತೆರಿಗೆ ಹಣ ಬಿಡುಗಡೆ

ಗುರುವಾರ, 11 ಆಗಸ್ಟ್ 2022 (09:14 IST)
ನವದೆಹಲಿ : ಕೇಂದ್ರದ ತೆರಿಗೆಗಳು ಮತ್ತು ಸುಂಕಗಳ ನಿವ್ವಳ ಆದಾಯದಲ್ಲಿ ಆಗಸ್ಟ್ ತಿಂಗಳ ಬಾಬತ್ತಿನಲ್ಲಿ ರಾಜ್ಯಗಳ ಪಾಲಿನ ಹಣ ಬಿಡುಗಡೆ ಮಾಡಲಾಗಿದೆ.
 
15 ನೇ ಹಣಕಾಸು ಆಯೋಗದ ಶಿಫಾರಸಿನಂತೆ ಈ ಹಣ ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಎರಡು ಕಂತುಗಳಲ್ಲಿ 4,254 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಎಲ್ಲ ರಾಜ್ಯಗಳಿಗೂ ಇಂದು ಒಟ್ಟಾರೆ 1,16,665 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.

ಬಿಹಾರ ರಾಜ್ಯಕ್ಕೆ 11,734 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದ್ದರೆ ಉತ್ತರ ಪ್ರದೇಶಕ್ಕೆ 20,928 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ.

ಇದು ಬಂಡವಾಳ ಮತ್ತು ಅಭಿವೃದ್ಧಿ ವೆಚ್ಚವನ್ನು ವೇಗಗೊಳಿಸುವ ನಿಟ್ಟಿನಲ್ಲಿ ರಾಜ್ಯಗಳನ್ನು ಬಲಪಡಿಸುವ ಕೇಂದ್ರ ಸರ್ಕಾರದ ಆಶಯ, ಬದ್ಧತೆಗೆ ಅನುಗುಣವಾಗಿದೆ. 

58,332.86 ಕೋಟಿ ಸಾಮಾನ್ಯ ಮಾಸಿಕ ವಿಕೇಂದ್ರೀಕರಣಕ್ಕೆ ವಿರುದ್ಧವಾಗಿ 1,16,665.75 ಕೋಟಿ ರೂಪಾಯಿ ಮೊತ್ತದ ತೆರಿಗೆ ಹಂಚಿಕೆಯ ಎರಡು ಕಂತುಗಳನ್ನು ಕೇಂದ್ರವು ರಾಜ್ಯ ಸರ್ಕಾರಗಳಿಗೆ ಬಿಡುಗಡೆ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ