ಲಾಲೂ ಪುತ್ರ ಡೈವೋರ್ಸ್ ಪ್ರಹಸನದಿಂದ ಲೋಕಸಭೆ ಚುನಾವಣೆ ಸೀಟು ಹಂಚಿಕೆ ಅಯೋಮಯ!
ಲಾಲೂ ಯಾದವ್ ಪುತ್ರನ ವಿಚ್ಛೇದನ ವಿಚಾರ ಇದೀಗ ಆರ್ ಜೆಡಿ ಮುಖ್ಯಸ್ಥರ ಕುಟುಂಬಕ್ಕೆ ದೊಡ್ಡ ತಲೆನೋವಾಗಿದೆ. ವಿಚ್ಛೇದನಕ್ಕೆ ಕುಟುಂಬ ಸದಸ್ಯರಲ್ಲಿ ಸಹಮತವಿಲ್ಲ. ಕುಟುಂಬ ಸದಸ್ಯರು ತನ್ನ ನಿರ್ಧಾರ ಬೆಂಬಲಿಸದಿದ್ದರೆ ಮನೆಗೆ ಮರಳುವುದಿಲ್ಲ ಎಂದು ತೇಜ್ ಪ್ರತಾಪ್ ರಚ್ಚೆ ಹಿಡಿದು ಕೂತಿದ್ದಾರೆ.
ಈ ಎಲ್ಲಾ ತಲೆನೋವುಗಳ ಮಧ್ಯೆ ಆರ್ ಜೆಡಿ ಮುಖ್ಯಸ್ಥ ಲಾಲೂ ಯಾದವ್ ಮತ್ತು ಪುತ್ರರು ಲೋಕಸಭೆ ಚುನಾವಣೆಗೆ ಮೈತ್ರಿ ಪಕ್ಷಗಳ ಜತೆ ಸೀಟು ಹಂಚಿಕೆ ವಿಚಾರ ಮಾತುಕತೆ ಮುಂದುವರಿಸಲು ಆಸಕ್ತಿ ತೋರುತ್ತಿಲ್ಲ. ಬಿಹಾರದಲ್ಲಿ ಹಿಂದೂಸ್ತಾನ್ ಅವಮ್ ಮೋರ್ಚಾ ಪಕ್ಷದೊಂದಿಗೆ ಆರ್ ಜೆಡಿ ಸೀಟು ಹಂಚಿಕೆ ವಿಚಾರವಾಗಿ ಈಗಾಗಲೇ ನಿರ್ಧಾರಕ್ಕೆ ಬರಬೇಕಿತ್ತು. ಆದರೆ ತೇಜ್ ಪ್ರತಾಪ್ ಪ್ರಕರಣದಿಂದಾಗಿ ಆರ್ ಜೆಡಿ ಮೊದಲ ಕುಟುಂಬ ಈ ಬಗ್ಗೆ ಮಾತುಕತೆಯೇ ನಡೆಸುತ್ತಿಲ್ಲ ಎನ್ನಲಾಗಿದೆ. ಲಾಲೂ ಯಾದವ್ ಕುಟುಂಬ ಸಮಸ್ಯೆಯಿಂದಾಗಿ ರಾಜಕಾರಣದಲ್ಲೂ ಪರಿಣಾಮ ಬೀರಿದೆ ಎನ್ನಲಾಗಿದೆ. ಇದು ಎಲ್ಲಿಯವರೆಗೆ ಹೋಗಿ ಮುಟ್ಟುತ್ತದೋ ಕಾದು ನೋಡಬೇಕು.