ಪತ್ನಿಗೆ ಆರು ತಿಂಗಳಿಗೇ ವಿಚ್ಛೇದನ ಕೊಟ್ಟ ಬಗ್ಗೆ ಲಾಲೂ ಪುತ್ರ ಹೇಳಿದ್ದೇನು ಗೊತ್ತಾ?
‘ಹೌದು ನಾವಿಬ್ಬರೂ ವಿಚ್ಛೇದನವಾಗುತ್ತಿರುವ ಸುದ್ದಿ ನಿಜ. ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದೂ ನಿಜ. ಇಷ್ಟವಿಲ್ಲದ ಕಷ್ಟದ ಬದುಕನ್ನು ಒಟ್ಟಿಗೆ ಕಳೆಯುವುದರಲ್ಲಿ ಅರ್ಥವಿಲ್ಲ’ ಎಂದು ತೇಜ್ ಪ್ರತಾಪ್ ವಿಚ್ಛೇದನದ ಕಾರಣ ನೀಡಿದ್ದಾರೆ.
ಅವರ ಪರ ವಕೀಲರೂ ಕೂಡಾ ಈ ಬಗ್ಗೆ ಹೇಳಿಕೆ ನೀಡಿದ್ದು, ನನ್ನ ಕಕ್ಷಿದಾರರು ತಮ್ಮ ಪತ್ನಿ ಜತೆ ಹೊಂದಾಣಿಕೆಯಾಗುತ್ತಿಲ್ಲ ಎನ್ನುವ ಕಾರಣಕ್ಕೆ ವಿಚ್ಛೇದನ ಕೋರಿದ್ದಾರೆ. ಆದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಕೊಡಲಾಗದು ಎಂದು ವಕೀಲರು ಹೇಳಿದ್ದಾರೆ.