ಅಣ್ಣಾಮಲೈ ಜತೆ ಸಂಘರ್ಘ, ವೇದಿಕೆಯಲ್ಲೇ ತಮಿಳಿ ಸೈಯನ್ನು ಗದರಿದ ಅಮಿತ್‌ ಶಾ

sampriya

ಬುಧವಾರ, 12 ಜೂನ್ 2024 (19:06 IST)
Photo By X
ಆಂಧ್ರಪ್ರದೇಶ: ಮುಖ್ಯಮಂತ್ರಿಯಾಗಿ ಎನ್ ಚಂದ್ರಬಾಬು ನಾಯ್ಡು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ನಾಯಕಿ, ತೆಲಂಗಾಣ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರನ್ನು ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಳ್ಳುವಂತೆ ಕಾಣಿಸುವ  ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವಿವಾದ ಮತ್ತು ಊಹಾಪೋಹಗಳಿಗೆ ಕಾರಣವಾಗಿದೆ.

ವಿಡಿಯೋದಲ್ಲಿ ಸೌಂದರರಾಜನ್‌ ಅವರು ವೇದಿಕೆಯಲ್ಲಿದ್ದ ಅಮಿತ್‌ ಶಾ ಸೇರಿದಂತೆ ಗಣ್ಯರಿಗೆ ನಮಸ್ಕರಿಸುತ್ತಾ ಹೋಗುತ್ತಿದ್ದಾಗ ಶಾ ಅವರು ವಾಪಾಸ್‌ ಕರೆದು ಗದರುತ್ತಿರುವ ಹಾಗೇ ಕಾಣಿಸುತ್ತದೆ. ಈ ವೇಳೆ ಇವರಿಬ್ಬರ ನಡುವೆ ಗಂಭೀರ ವಿಷಯಕ್ಕೆ ಚರ್ಚೆಯಾಗುತ್ತಿರುವುದು ಕಂಡುಬರುತ್ತದೆ.

ಕೆಲವರು ಈ ಘಟನೆಯನ್ನು ತಮಿಳುನಾಡು ಬಿಜೆಪಿಯೊಳಗಿನ, ಅದರಲ್ಲೂ ವಿಶೇಷವಾಗಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಮತ್ತು ತಮಿಳಿಸೈ ಸೌಂದರರಾಜನ್ ಅವರ ಬೆಂಬಲಿಗರ ನಡುವಿನ ಒಳಜಗಳಕ್ಕೆ ಸಂಬಂಧಿಸಿದ್ದಾಗಿದೆ ಎಂದು ಹೇಳಿದ್ದಾರೆ.

ಈ ವಿವಾದ ತಮಿಳುನಾಡಿನ ಆಡಳಿತ ಪಕ್ಷವಾದ ಡಿಎಂಕೆಯಿಂದ ಗಮನ ಸೆಳೆದಿದೆ. ಡಿಎಂಕೆ ವಕ್ತಾರ ಸರವಣನ್ ಅಣ್ಣಾದೊರೈ, "ಇದು ಯಾವ ರೀತಿಯ ರಾಜಕೀಯ? ತಮಿಳುನಾಡಿನ ಪ್ರಮುಖ ಮಹಿಳಾ ರಾಜಕಾರಣಿಗೆ ಸಾರ್ವಜನಿಕವಾಗಿ ಛೀಮಾರಿ ಹಾಕುವುದು ಸೌಜನ್ಯವೇ? ಇದನ್ನು ಎಲ್ಲರೂ ನೋಡುತ್ತಾರೆ ಎಂದು ಅಮಿತ್ ಶಾ ತಿಳಿದುಕೊಳ್ಳಬೇಕು ಎಂದು ಬರೆದುಕೊಂಡಿದ್ದಾರೆ.

ತಮಿಳುನಾಡಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಮತ್ತು ತಮಿಳಿಸೈ ಸೌಂದರರಾಜನ್ ನಡುವಿನ ವದಂತಿಯ ಭಿನ್ನಾಭಿಪ್ರಾಯವು ಮೂಲ ವಿಷಯವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ