ಎಐಎಡಿಎಂಕೆ ಪಕ್ಷದಿಂದ ಶಶಿಕಲಾ, ದಿನಕರನ್ ವಜಾ

ಸೋಮವಾರ, 28 ಆಗಸ್ಟ್ 2017 (14:08 IST)
ತಮಿಳುನಾಡಿನಲ್ಲಿ ಇಂದು ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಎಐಎಡಿಎಂಕೆ ಪಕ್ಷದಿಂದ ವಿ.ಕೆ. ಶಶಿಕಲಾ ಮತ್ತು ಟಿಟಿವಿ ದಿನಕರನ್ ಅವರನ್ನು ಸಿಎಂ ಪಳನಿಸ್ವಾಮಿ ನೇತೃತ್ವದ ಸಭೆಯಲ್ಲಿ ವಜಾಗೊಳಿಸಲಾಗಿದೆ.
ಇಂದು ಎಐಎಡಿಎಂಕೆ ಕಚೇರಿಯಲ್ಲಿ ಸಿಎಂ ಪಳನಿಸ್ವಾಮಿ ನೇತೃತ್ವದಲ್ಲಿ ರಾಜ್ಯದ ರಾಜಕೀಯ ಸ್ಥಿತಿಗತಿ ಕುರಿತಂತೆ ಚರ್ಚಿಸಲು ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಶಶಿಕಲಾ ಮತ್ತು ದಿನಕರನ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ವಜಾಗೊಳಿಸಲಾಯಿತು.
 
ಕೆಲ ದಿನಗಳ ಹಿಂದೆ ಸಿಎಂ ಪಳನಿಸ್ವಾಮಿ ಮತ್ತು ಪನ್ನೀರ್‌ಸೆಲ್ವಂ ಬಣಗಳು ಒಂದಾಗಿದ್ದವು. ಕೆಲ ದಿನಗಳಲ್ಲಿ ಪಕ್ಷದಿಂದ ಶಶಿಕಲಾ ಮತ್ತು ದಿನಕರನ್ ಅವರನ್ನು ಉಚ್ಚಾಟಿಸಬೇಕು ಎನ್ನುವ ಷರತ್ತು ಇಡಲಾಗಿತ್ತು. ಅದರಂತೆ, ಇಂದು ಶಶಿಕಲಾ ಮತ್ತು ದಿನಕರನ್‌ಗೆ ಗೇಟ್ ಪಾಸ್ ನೀಡಲಾಗಿದೆ.
 
ಮತ್ತೊಂದೆಡೆ ಟಿಟಿವಿ ದಿನಕರನ್ ಪ್ರತ್ಯೇಕ ಸಭೆ ಕರೆದಿದ್ದು 21 ಎಐಎಡಿಎಂಕೆ ಶಾಸಕರು ಪಾಲ್ಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ