ಮೊಬೈಲ್ ಕದಿಯುತ್ತಿದ್ದ ಬಾಲಕಿಯ ಕರ್ತನಾಕ್ ಐಡಿಯಾ ನೋಡಿ

ಬುಧವಾರ, 29 ಡಿಸೆಂಬರ್ 2021 (14:40 IST)
ಲಕ್ನೋ : ಫೋನ್ ಕದ್ದಳೆಂದು ಬಾಲಕಿಯನ್ನು ಅಂಗಡಿ ಮಾಲೀಕನ ಮನೆಗೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗ ಥಳಿಸಿದ ಘಟನೆ ಅಮೇಥಿಯ ರಾಯ್ಪುರ ಫುಲ್ವಾರಿ ಗ್ರಾಮದಲ್ಲಿ ನಡೆದಿದೆ.
 
ಗ್ರಾಮದ ನಿವಾಸಿ ಸೂರಜ್ ಸೋನಿ ಅವರ ಮೊಬೈಲ್ ಅಂಗಡಿಯಿಂದ ಅಪ್ರಾಪ್ತೆ ಮೊಬೈಲ್ ಫೋನ್ಗಳನ್ನು ಕಳವು ಮಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಳಿಕ ಈ ವಿಷಯ ತಿಳಿದ ಮಾಲೀಕ ಸೋನಿ, ಇದನ್ನು ಪೊಲೀಸರ ಗಮನಕ್ಕೆ ತರುವ ಬದಲು, ಆತನ ಸ್ನೇಹಿತನ ಜೊತೆ ಸೇರಿ ಬಾಲಕಿಯನ್ನು ಹಿಡಿದು ಸೋನಿಯ ಮನೆಗೆ ಕರೆದೊಯ್ದು ಚೆನ್ನಾಗಿ ಥಳಿಸಿದ್ದಾರೆ.

ಅಲ್ಲದೆ ಆಕೆಯ ಕೂದಲು ಹಿಡಿದು ಎಳೆದಾಡಿದ್ದಾರೆ. ಯುವಕನೊಬ್ಬ ಕೋಲು ಹಿಡಿದು ಬಾಲಕಿಯನ್ನು ನೆಲದ ಮೇಲೆ ಮಲಗಿಸಿ, ಅವಳ ಕಾಲುಗಳ ಮೇಲೆ ಬೀಸುತ್ತಾರೆ. 

ತಮ್ಮ ಮೇಲೆ ದೂರು ದಾಖಲಾಗಿರುವ ವಿಚಾರ ತಿಳಿದ ಯುವಕರು ಪರಾರಿಯಾಗಿದ್ದಾರೆ. ಪೊಲೀಸರು ಇಬ್ಬರು ಯುವಕರ ಮೇಲೆ ಪ್ರಕರಣ ದಾಖಲಿಸಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ