ಸೀಮಿತ ದಾಳಿ ನಡೆದಿರುವುದನ್ನು ತಳ್ಳಿ ಹಾಕಿದ ಅಂಜುಬುರುಕ ಪಾಕ್

ಗುರುವಾರ, 29 ಸೆಪ್ಟಂಬರ್ 2016 (15:46 IST)
ಪಾಕ್ ಗಡಿಯಲ್ಲಿ ನಿನ್ನೆ ರಾತ್ರಿ ಸೀಮಿತ ದಾಳಿ ನಡೆಸಿ 38 ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ಭಾರತೀಯ ಸೇನೆ ಪ್ರಕಟಿಸಿದೆ. ಆದರೆ ಭಾರತದ ಕಡೆಯಿಂದ ಯಾವುದೇ ರೀತಿಯ ದಾಳಿ ನಡೆದಿರುವುದನ್ನು ಪಾಕ್ ತಳ್ಳಿ ಹಾಕಿದೆ. 

ನಮ್ಮ ವಿಶೇಷ ಸೈನಿಕರು ಪಾಕ್ ಆಕ್ರಮಿತ ಕಾಶ್ಮೀರದ ಒಳ ಹೊಕ್ಕಿ 38 ರಿಂದ 40 ಉಗ್ರರನ್ನು ಹತ್ಯೆಗೈದಿದ್ದಾರೆ. ಈ ಕಾರ್ಯಾಚರಣೆಯ ಸಂಪೂರ್ಣ ದೃಶ್ಯಾವಳಿಯನ್ನು ಸೇನೆ ಡ್ರೋಣ್ ಕ್ಯಾಮರಾದಿಂದ ಚಿತ್ರೀಕರಿಸಿಕೊಂಡಿದೆ.
 
ಆದರೆ ಭಾರತ ಸೀಮಿತ ದಾಳಿಯನ್ನು ನಡೆಸಿರುವುದನ್ನು ಅಲ್ಲಗಳೆದಿರುವ ಪಾಕ್ ಗಡಿಯಲ್ಲಿ ಕೇವಲ ಗುಂಡಿನ ಚಕಮಕಿ ನಡೆದಿದೆ ಎಂದು ಪಾಕ್ ಹೇಳಿದೆ. ಈ ಮೂಲಕ ತನ್ನ ಅಂಜುಬುರುಕುತನವನ್ನು ಪ್ರದರ್ಶಿಸಿದೆ. 
 
ಕಳೆದ ರಾತ್ರಿ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಉಗ್ರರ ಕ್ಯಾಂಪ್‌ಗಳನ್ನು ಗುರಿಯಾಗಿರಿಸಿಕೊಂಡು ಸರ್ಜಿಕಲ್ ಸ್ಟ್ರೈಕ್ (ಸೀಮಿತ ದಾಳಿ) ಕೈಗೊಳ್ಳಲಾಗಿದ್ದು ದಾಳಿಯಲ್ಲಿ 40ಕ್ಕೂ ಹೆಚ್ಚು ಉಗ್ರರು ಮತ್ತು ಇಬ್ಬರು ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ. ಅವರ ಜತೆಗಿದ್ದ ಹಲವರು ಗಾಯಗೊಂಡಿದ್ದಾರೆ ಎಂದು ಸೇನಾ ಮುಖ್ಯಸ್ಥ ರಣಬೀರ್ ಸಿಂಗ್ ಬಹಿರಂಗ ಪಡಿಸಿದ್ದು ಇದು ದೇಶಾದ್ಯಂತ ಹೊಸ ಸಂಚಲನವನ್ನು ಮೂಡಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ