ಪಂಜಾಬ್‌ ನಲ್ಲಿ 282 ಯೋಧರ ಅಸ್ಥಿಪಂಜರ ಪತ್ತೆ!

ಗುರುವಾರ, 12 ಮೇ 2022 (17:16 IST)
1857ರಲ್ಲಿ ದೇಶದ ಮೊದಲ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು ಎನ್ನಲಾದ ೨೮೨ ಭಾರತೀಯ ಯೋಧರ ಅಸ್ಥಿಪಂಜರ ಪಂಜಾಬ್‌ ನಲ್ಲಿ ಪತ್ತೆಯಾಗಿದೆ.
ಅಮೃತಸರದಲ್ಲಿ ಬ್ರಿಟಿಷ್‌ ಸರಕಾರ ಗಲ್ಲಿಗೇರಿಸಿದ್ದ ಯೋಧರ ಅಸ್ಥಿಪಂಜರ ಇದು ಎಂದು ಇತಿಹಾಸ ತಜ್ಞರು ಹೇಳಿದ್ದಾರೆ.
ಬಂದೂಕುಗಳಿಗೆ ದನ ಹಾಗೂ ಹಂದಿ ಮಾಂಸ ಬಳಕೆ ಮಾಡುವುದನ್ನು ವಿರೋಧಿಸುವ ಮೂಲಕ ಯೋಧರು ಮೊದಲ ಬಾರಿ ಬ್ರಿಟಿಷ್‌ ಸೇನೆ ವಿರುದ್ಧ ಬಂಡಾಯ ಘೋಷಿಸಿದ್ದರು. ಬ್ರಿಟಿಷ್‌ ಸೇನೆಯಲ್ಲಿದ್ದೂ ಬಂಡಾಯ ಘೋಷಿಸಿದ 282 ಯೋಧರನ್ನು ಅಮೃತಸರದ ಅಜ್ನಾಲಾ ಎಂಬಲ್ಲಿ ಗಲ್ಲಿಗೇರಿಸಲಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ