ಹೆತ್ತವರ ವಿರುದ್ಧ ದೂರು ನೀಡಿದ ಮಗ! ಮುಂದೇನಾಯ್ತು?
ಆರೋಪಿಯನ್ನು ಬಂಜಾರಾ ಹಿಲ್ಸ್ನ ನಂದಿನಗರ ನಿವಾಸಿ ಬಾನೋತ್ ಲಾಲು ಎಂದು ಗುರುತಿಸಲಾಗಿದೆ. ಪೊಲೀಸ್ ತನಿಖೆಯಲ್ಲಿ ಲಾಲು ಪೋಷಕರ ವಿರುದ್ಧ ಮಾಡಿರುವ ದೂರು ಸುಳ್ಳು ಎಂದು ಗೊತ್ತಾದ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಲಾಲು ಡಿಸೆಂಬರ್ 17 ರಂದು ರಾತ್ರಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾನೆ. ಆಗ ತನ್ನ ಸಹೋದರನನ್ನು ಹೆತ್ತವರು ಕೊಂದಿದ್ದಾರೆ ಎಂದು ಹೇಳಿ ಪೋಷಕರ ವಿರುದ್ಧ ಆರೋಪ ಮಾಡಿದ್ದಾನೆ.
ಮಾಹಿತಿ ಪಡೆದಿರುವ ಪೊಲೀಸರು ತಕ್ಷಣವೇ ಸ್ಥಳಕ್ಕೆ ಹೋಗಿ ತನಿಖೆ ಮಾಡಿದ್ದಾರೆ. ಯಾವುದೇ ಕೊಲೆ ನಡೆದಿಲ್ಲ ಎಂದು ಪೊಲೀಸರಿಗೆ ತಿಳಿದು ಬಂದಿದೆ. ಆದರೆ ಲಾಲು ಯಾಕೆ ಇಂಥಹ ಆರೋಪನ್ನು ಮಾಡಿದ್ದಾನೆ ಎಂದು ವಿಚಾರಿಸಿದಾಗ ಸತ್ಯ ಹೊರ ಬಿದ್ದಿದೆ.