ರಾಯ್ ಬರೇಲಿ: ಲೋಕಸಭೆ ಚುನಾವಣೆಯಲ್ಲಿ ರಾಯ್ ಬರೇಲಿ ಕ್ಷೇತ್ರದಿಂದ ಕಣಕ್ಕಿಳಿದಿರುವ ರಾಹುಲ್ ಗಾಂಧಿ ಪರವಾಗಿ ಇಂದು ಸೋನಿಯಾ ಗಾಂಧಿ, ಸಹೋದರಿ ಪ್ರಿಯಾಂಕ ವಾದ್ರಾ ಭರ್ಜರಿ ಪ್ರಚಾರ ನಡೆಸಲಿದ್ದಾರೆ.
ಇಂದು ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಸೋನಿಯಾ ಕುಟುಂಬವೇ ಆಗಮಿಸುತ್ತಿದೆ. ನಿನ್ನೆಯೇ ಇದಕ್ಕಾಗಿ ಸೋನಿಯಾ ಗಾಂಧಿ ರಾಯ್ ಬರೇಲಿಗೆ ಬಂದಿಳಿದಿದ್ದಾರೆ. ಇಲ್ಲಿನ ಸ್ಥಳೀಯ ನಾಯಕರೊಂದಿಗೆ ಸಭೆ ನಡೆಸಿದ್ದಾರೆ.
ಪ್ರಿಯಾಂಕ ಗಾಂಧಿ ಈಗಾಗಲೇ ರಾಹುಲ್ ಜೊತೆಗೆ ರಾಯ್ ಬರೇಲಿ, ಅಮೇಠಿಯಲ್ಲಿ ಪ್ರಚಾರ ನಡೆಸಿದ್ದರು. ಇಂದು ಮತ್ತೊಮ್ಮೆ ಸಹೋದರ, ತಾಯಿಯೊಂದಿಗೆ ಪ್ರಚಾರ ಸಮಾವೇಶದಲ್ಲಿ ಜೊತೆಯಾಗಲಿದ್ದಾರೆ. ಕಾಂಗ್ರೆಸ್ ಗೆ ರಾಯ್ ಬರೇಲಿ ಮತ್ತು ಅಮೇಠಿ ಪ್ರತಿಷ್ಠೆಯ ಕಣವಾಗಿದೆ.
ಮೊದಲಿನಿಂದಲೂ ಈ ಎರಡೂ ಕ್ಷೇತ್ರಗಳಲ್ಲಿ ಗಾಂಧಿ ಕುಟುಂಬವೇ ಸ್ಪರ್ಧಿಸುತ್ತಾ ಬಂದಿದೆ. ಕಳೆದ ಬಾರಿ ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ಸೋಲು ಅನುಭವಿಸಿದ್ದರು. ಆದರೆ ಈ ಬಾರಿ ಮತ್ತೆ ಅಧಿಕಾರಕ್ಕೇರುವ ಪ್ರಯತ್ನದಲ್ಲಿರುವ ಕಾಂಗ್ರೆಸ್ ಈ ಕ್ಷೇತ್ರವನ್ನು ವಾಪಸ್ ಪಡೆಯಲು ಶತಾಯಗತಾಯ ಪ್ರಯತ್ನಿಸುತ್ತಿದೆ.