ಬಸ್ಕಿ ಹೊಡೆದು ಸುಸ್ತಾದ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಮಂಗಳವಾರ, 12 ಏಪ್ರಿಲ್ 2022 (11:34 IST)
ಒರಿಸ್ಸಾ: ಶಿಕ್ಷಕರು ನೀಡಿದ ಶಿಕ್ಷೆಯಂತೆ 100 ಬಸ್ಕಿ ಹೊಡೆದ ವಿದ್ಯಾರ್ಥಿಗಳು ಸುಸ್ತಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಒರಿಸ್ಸಾದಲ್ಲಿ ನಡೆದಿದೆ.

ಶಾಲೆಗೆ ತಡವಾಗಿ ಬಂದಿದ್ದರಿಂದ 100 ಬಸ್ಕಿ ಹೊಡೆಯಲು ಶಿಕ್ಷಕ ಬಿಕಾಶ್ ಧರುವಾ ಸೂಚಿಸಿದ್ದರು. ಅದರಂತೆ ಬಸ್ಕಿ ಹೊಡೆದ 7 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ.

ಕೂಡಲೇ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಬಸ್ಕಿ ಹೊಡೆಸಿದ ಅಧ್ಯಾಪಕನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ