NCERT ಪಠ್ಯಕ್ರಮ ನಿರ್ಧಾರ ಮಂಡಳಿಯಲ್ಲಿ ಸುಧಾಮೂರ್ತಿಗೆ ಸ್ಥಾನ

ಭಾನುವಾರ, 13 ಆಗಸ್ಟ್ 2023 (11:33 IST)
ನವದೆಹಲಿ : 3 ರಿಂದ 12 ನೇ ತರಗತಿಯ ಪಠ್ಯಕ್ರಮವನ್ನು ಅಂತಿಮಗೊಳಿಸಲು NCERT ರಚಿಸಿರುವ ಮಂಡಳಿಯಲ್ಲಿ ಲೇಖಕಿ ಹಾಗೂ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ, ಗಾಯಕ ಶಂಕರ್ ಮಹಾದೇವನ್, ಅರ್ಥಶಾಸ್ತ್ರಜ್ಞ ಮತ್ತು ಪ್ರಧಾನಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಸಂಜೀವ್ ಸನ್ಯಾಲ್ ಸೇರಿದಂತೆ ಮುಂತಾದ 19 ಸದಸ್ಯರು ಇರಲಿದ್ದಾರೆ.


ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ 2020ರ ಪಠ್ಯಕ್ರಮವನ್ನು ಸೇರಿಸಲು ಸಮಿತಿ ಕಾರ್ಯ ನಿರ್ವಹಿಸಲಿದೆ. ಇದು ಕಸ್ತೂರಿರಂಗನ್ ನೇತೃತ್ವದ ಸ್ಟೀರಿಂಗ್ ಸಮಿತಿಯು ಅಭಿವೃದ್ಧಿಪಡಿಸಿದ ಶಾಲಾ ಶಿಕ್ಷಣದ ರೂಪುರೇಷೆಯ ಆಧಾರದಲ್ಲಿ ಕಾರ್ಯನಿರ್ವಹಿಸಲಿದೆ. 
ಶಾಲಾ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಲು ಮಂಡಳಿಗೆ ಅಧಿಕಾರ ನೀಡಲಾಗುವುದು. ಅದಲ್ಲದೇ 3ನೇ ತರಗತಿಯಿಂದ 12 ನೇ ತರಗತಿಯವರೆಗೆ ಬೋಧನೆ ಮತ್ತು ಕಲಿಕೆಯ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸುವುದು ಮಂಡಳಿಯ ಜವಾಬ್ದಾರಿ ಆಗಿರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ