ಕೊನೆಗೂ ಶವವಾಗಿ ಬೋರ್ ವೆಲ್ ನಿಂದ ಹೊರಗೆ ಬಂದ 2 ವರ್ಷದ ಬಾಲಕ ಸುಜಿತ್

ಮಂಗಳವಾರ, 29 ಅಕ್ಟೋಬರ್ 2019 (10:15 IST)
ಚೆನ್ನೈ : ಕಳೆದ ನಾಲ್ಕು ದಿಗನಗಳಿಂದ ಬೋರ್ ವೆಲ್ ನೊಳಗೆ ಬಿದ್ದ 2 ವರ್ಷದ ಬಾಲಕ ಸುಜಿತ್ ಸಾವನ್ನಪ್ಪಿದ್ದು, ಆತನ ಶವವನ್ನು ಹೊರತೆಗೆಯಲಾಗಿದೆ.




2 ವರ್ಷದ ಬಾಲಕ ಸುಜಿತ್ ಆಟವಾಡುತ್ತಿದ್ದಾಗ ಶುಕ್ರವಾರದಂದು ತಮಿಳುನಾಡಿನ ತಿರುಚ್ಚಿ ನಡಕಟ್ಟುಪಟ್ಟಿ ಸಮೀಪ ಬೋರ್ ವೆಲ್ ಗೆ ಆಯತಪ್ಪಿ ಬಿದ್ದಿದ್ದಾನೆ. ಕಳೆದ ನಾಲ್ಕು ದಿನಗಳಿಂದ ಆತನನ್ನು ರಕ್ಷಿಸಲು ಅಲ್ಲಿನ ಜಿಲ್ಲಾಡಳಿತ ಹರಸಾಹಸ ಮಾಡಿದ್ದು, ಜರ್ಮನ್ ನಿರ್ಮಿತ ಕೊರೆಯುವ ಯಂತ್ರಗಳನ್ನು ತರಿಸಿ ಭೂಮಿ ಕೊರೆದು ಬಾಲಕನನ್ನು ರಕ್ಷಿಸಲು ಪ್ರಯತ್ನಿಸಿತ್ತು.


ಆದರೆ ಬೋರ್ ವೆಲ್ ನೊಳಗಿನಿಂದ ದುರ್ವಾಸನೆ ಬರುತ್ತಿದ್ದ ಕಾರಣ ಬಾಲಕ ಮೃತಪಟ್ಟಿರುವುದು ಖಚಿತವಾಗಿದ್ದು, ಇದೀಗ ಆತನ ಶವವನ್ನು ಹೊರತೆಗೆಯಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ