ಕಿಲ್ಲರ್ ಚಾರ್ಲ್ಸ್ ಶೋಭರಾಜ್ ಬಿಡುಗಡೆಗೆ ಸುಪ್ರೀಂ ಆದೇಶ

ಗುರುವಾರ, 22 ಡಿಸೆಂಬರ್ 2022 (09:58 IST)
ಕಠ್ಮಂಡು : ಇಂಡೋ-ಫ್ರೆಂಚ್ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ ನನ್ನ ಜೈಲಿನಿಂದ ಬಿಡುಗಡೆಗೊಳಿಸುವಂತೆ ನೇಪಾಳ ಸುಪ್ರೀಂ ಕೋರ್ಟ್ ಇಂದು ಆದೇಶಿಸಿದೆ.
 
19 ವರ್ಷ ಜೈಲು ಶಿಕ್ಷೆ ಅನುಭವಿಸಿರುವ ಚಾರ್ಲ್ಸ್ ಶೋಭರಾಜ್ಗೆ ವಯಸ್ಸಿನ ಆಧಾರದ ಮೇಲೆ ಬಿಡುಗಡೆಗೆ ಆದೇಶಿಸಿದೆ. ಅಲ್ಲದೇ ಬಿಡುಗಡೆಯಾದ 15 ದಿನಗಳಲ್ಲೇ ಆತನನ್ನು ಗಡಿಪಾರು ಮಾಡುವಂತೆಯೂ ನ್ಯಾಯಾಲಯ ಆದೇಶಿಸಿದೆ.

ಶೋಭರಾಜ್ 2003ರಿಂದಲೂ ಕಠ್ಮಂಡು ಕೇಂದ್ರ ಕಾರಾಗೃಹದಲ್ಲೇ ಬಂಧಿತನಾಗಿದ್ದ. ಸುಳ್ಳು ಪಾಸ್ಪೋರ್ಟ್ ಬಳಸಿ ಪ್ರಯಾಣ ಹಾಗೂ 1975ರಲ್ಲಿ ಅಮೆರಿಕದ ಪ್ರವಾಸಿ ಕೊನ್ನಿ ಜೋ ಬೊರೊನ್ಜಿಚ್ (29), ಕೆನಡಾದ ಲಾರೆಂಟ್ ಕ್ಯಾರಿಯೆರ್ (26) ಎಂಬವರ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ.

ಕಠ್ಮಂಡು ಜಿಲ್ಲಾ ನ್ಯಾಯಾಲಯ ವಿಧಿಸಿದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ 2010ರಲ್ಲಿ ಎತ್ತಿಹಿಡಿದಿತ್ತು. ನಂತರ 2014ರಲ್ಲಿ ಕೆನಡಾದ ಪ್ರಜೆಯನ್ನು ಹತ್ಯೆಗೈದ ಆರೋಪದಲ್ಲಿ ಭಕ್ತಾಪುರ ಜಿಲ್ಲಾ ನ್ಯಾಯಾಲಯ ಆತನಿಗೆ ಶಿಕ್ಷೆ ವಿಧಿಸಿತ್ತು. ಇದೀಗ ಶೋಭರಾಜ್ಗೆ 78 ವರ್ಷ ವಯಸ್ಸಾದ ಹಿನ್ನೆಲೆಯಲ್ಲಿ ಕೋರ್ಟ್ ಬಿಡುಗಡೆಗೆ ಆದೇಶಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ