ಆ ಒಂದು ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಬಾರದ ಲೋಕಕ್ಕೆ ತೆರಳಿದ ಸುಷ್ಮಾ

ಬುಧವಾರ, 7 ಆಗಸ್ಟ್ 2019 (07:16 IST)
ನವದೆಹಲಿ: ಸುಷ್ಮಾ ಸ್ವರಾಜ್ ಎಂದರೆ ಪಕ್ಷಾತೀತವಾಗಿ ಎಲ್ಲರಿಗೂ ಇಷ್ಟವಾಗಿದ್ದ ರಾಜಕೀಯ ನಾಯಕಿ. ತಮ್ಮ ಕೊನೆಯ ಕ್ಷಣಗಳಲ್ಲೂ ಸುಷ್ಮಾ ಸಕ್ರಿಯರಾಗಿಯೇ ಇದ್ದರು.


ನಿನ್ನೆಯಷ್ಟೇ ಲೋಕಸಭೆಯಲ್ಲಿ ಆರ್ಟಿಕಲ್ 370 ರದ್ದತಿ ನಿರ್ಣಯ ಪಾಸ್ ಮಾಡಿದ್ದ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದೇ ಸುಷ್ಮಾರ ಕೊನೆಯ ಟ್ವೀಟ್.

ಅವರಿಗೆ ಸಾವಿನ ಮುನ್ಸೂಚನೆ ಮೊದಲೇ ಸಿಕ್ಕಿತ್ತೇ ಏನೋ ಎಂಬಂತೆ ಆ ಟ್ವೀಟ್ ನಲ್ಲಿ ಸುಷ್ಮಾ ಪ್ರಧಾನಿ ಮೋದಿಗೆ ಧನ್ಯವಾದ ಸಲ್ಲಿಸುವಾಗ ನನ್ನ ಜೀವಿತಾವಧಿಯಲ್ಲೇ ಇದನ್ನು ನೋಡಲು ಸಾಧ್ಯವಾಗುತ್ತಿದೆ ಎಂದಿದ್ದರು. ಆ ಟ್ವೀಟ್ ಮಾಡಿದ ನಾಲ್ಕು ಗಂಟೆಗಳ ಬಳಿಕ ಸುಷ್ಮಾ ಬಾರದ ಲೋಕಕ್ಕೆ ತೆರಳಿದ್ದು ವಿಪರ್ಯಾಸವೇ ಸರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ