ರಾಮಮಂದಿರ ಭೂಮಿಪೂಜೆ ದಿನ ಅಟ್ಯಾಕ್ ಮಾಡಲು ಉಗ್ರರ ಪ್ಲ್ಯಾನ್

ಬುಧವಾರ, 29 ಜುಲೈ 2020 (12:07 IST)
ನವದೆಹಲಿ: ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ನಿರ್ಮಾಣದ ಭೂಮಿಪೂಜೆಗೆ ಸಕಲ ಸಿದ್ಧತೆ ನಡೆದಿರುವ ಬೆನ್ನಲ್ಲೇ ಉಗ್ರರಿಂದ ಬೆದರಿಕೆ ಬಂದಿದೆ.


ಅದೇ ದಿನ ದಾಳಿ ನಡೆಸಿ ಶಾಂತಿ ಕದಡಲು ಉಗ್ರರು ತಯಾರಿ ನಡೆಸಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಉತ್ತರ ಪ್ರದೇಶ, ದೆಹಲಿ ಮತ್ತು ಜಮ್ಮು-ಕಾಶ್ಮೀರದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಭೂಮಿ ಪೂಜೆಯ ಬಳಿಕ ಆಗಸ್ಟ್ 15 ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಗೂ ತೊಂದರೆ ಉಂಟು ಮಾಡಲು ಉಗ್ರರು ಸಂಚು ರೂಪಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಬಂದೋಬಸ್ತ್ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ