ಇಂದು ದೇಶದಾದ್ಯಂತ ಕೊರೊನಾ ಲಸಿಕೆ ಡ್ರೈ ರನ್

ಶನಿವಾರ, 2 ಜನವರಿ 2021 (11:26 IST)
ನವದೆಹಲಿ : ಇಂದು ದೇಶದಾದ್ಯಂತ ಕೊರೊನಾ ಲಸಿಕೆ ವಿತರಣೆ ರಿಹರ್ಸಲ್ ನಡೆಸಲಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ.

ಇಂದು ದೇಶದ 116 ಜಿಲ್ಲೆ, 259 ಕೇಂದ್ರಗಳಲ್ಲಿ ಡ್ರೈ ರನ್ ನಡೆಸಲಾಗುತ್ತಿದೆ ಎಂದು  ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಹಾಗೇ ಇಂದು ರಾಜ್ಯದಲ್ಲೂ ಕೂಡ ಕೊರೊನಾ ಲಸಿಕೆ ವಿತರಣೆ ರಿಹರ್ಸಲ್ ನಡೆಸಲಾಗುತ್ತಿದೆ. ಇಂದು 5 ಜಿಲ್ಲೆಗಳಲ್ಲಿ ಲಸಿಕೆ ವಿತರಣೆ ನಡೆಸಲಾಗುತ್ತಿದೆ, ಬೆಂಗಳೂರು, ಬೆಳಗಾವಿ, ಕಲಬುರಗಿ, ಮೈಸೂರು, ಶಿವಮೊಗ್ಗ ಈ 5 ಜಿಲ್ಲೆಗಳ 15 ಆಸ್ಪತ್ರೆಗಳಲ್ಲಿ ಲಸಿಕೆ ವಿತರಣೆ ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದೆ, ಆಯಾ ಜಿಲ್ಲಾ, ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡ್ರೈ ರನ್ ಕಾರ್ಯಕ್ರಮ ನಡೆಸಲಾಗುತ್ತಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ