ಪ್ರೊಫೈಲ್ ಫೋಟೋದಲ್ಲಿ ತಿರಂಗಾ ರಾರಾಜಿಸಲಿ : ಪ್ರಧಾನಿ ಮೋದಿ ಕರೆ

ಭಾನುವಾರ, 13 ಆಗಸ್ಟ್ 2023 (14:22 IST)
ನವದೆಹಲಿ : ಸ್ವಾತಂತ್ರ್ಯ ದಿನದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರಿಗೆ ಕರೆ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮಗಳ ಖಾತೆಗಳ ಪ್ರೊಫೈಲ್ ಚಿತ್ರಗಳನ್ನು ತ್ರಿವರ್ಣ ಧ್ವಜವಾಗಿ ಬದಲಾಯಿಸಲು ಮೋದಿ ಭಾರತೀಯರಲ್ಲಿ ಮನವಿ ಮಾಡಿದ್ದಾರೆ. ಈ ಮೂಲಕ ದೇಶ ಹಾಗೂ ಭಾರತೀಯರ ನಡುವೆ ಬಾಂಧವ್ಯವನ್ನು ಗಾಢವಾಗಿಸೋಣ ಎಂದು ಅವರು ಹೇಳಿದ್ದಾರೆ.

ಆಗಸ್ಟ್ 13ರಿಂದ 15ರ ನಡುವೆ ಹರ್ ಘರ್ ತಿರಂಗಾ ಅಭಿಯಾನವನ್ನು ಆಚರಿಸಿ. ತಿರಂಗಾ ಜೊತೆಗಿನ ಫೋಟೋ ತೆಗೆದು ಹರ್ ಘರ್ ತಿರಂಗಾ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿ. ಪ್ರತಿಯೊಬ್ಬ ಭಾರತೀಯನೂ ತ್ರಿವರ್ಣ ಧ್ವಜದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದು, ಮತ್ತಷ್ಟು ರಾಷ್ಟ್ರೀಯ ಪ್ರಗತಿಗೆ ಶ್ರಮಿಸಲು ಇದು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಮೋದಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ