ನಾಲ್ಕನೇ ಬಾರಿ ಏಷ್ಯನ್ ಚಾಂಪಿಯನ್ ಆದ ಭಾರತ ಹಾಕಿ ತಂಡಕ್ಕೆ ಅಭಿನಂದನೆಗಳ ಸುರಿಮಳೆ

ಭಾನುವಾರ, 13 ಆಗಸ್ಟ್ 2023 (08:50 IST)
ಚೆನ್ನೈ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿಯ ಫೈನಲ್ ನಲ್ಲಿ ಮಲೇಷ್ಯಾ ವಿರುದ್ಧ ಗೆದ್ದ ಭಾರತ ಹಾಕಿ ತಂಡ ನಾಲ್ಕನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಮಲೇಷ್ಯಾವನ್ನು 4-3 ಅಂತರದಿಂದ ಭಾರತ ಮಣಿಸಿದೆ. ಮೊದಲು ಭಾರತವೇ ಗೋಲು ಗಳಿಸಿದರೂ ಮೊದಲಾರ್ಧದಲ್ಲಿ ಮುನ್ನಡೆ ಕಾಯ್ದುಕೊಳ್ಳಲು ವಿಫಲವಾಗಿತ್ತು. ಪರಿಣಾಮ ಮಲೇಷ್ಯಾ 1-3 ಅಂತರದಿಂದ ಮುನ್ನಡೆಯಲ್ಲಿತ್ತು. ಆದರೆ ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿಯಾಗಿ ಆಟವಾಡಿದ ಭಾರತ ಮಲೇಷ್ಯಾವನ್ನು ಮಣಿಸಲು ಯಶಸ್ವಿಯಾಯಿತು.  56 ನೇ ನಿಮಿಷದಲ್ಲಿ ಸುಖ್ ಜೀತ್ ನೀಡಿದ ಪಾಸ್ ನ್ನು ಆಕಾಶ್ ದೀಪ್ ಗೋಲಾಗಿ ಪರಿವರ್ತಿಸುವ ಮೂಲಕ ಭಾರತಕ್ಕೆ 4-3 ಅಂತರದ ಗೆಲುವು ನೀಡಿದರು.

ಈ ಮೂಲಕ ಭಾರತ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತೀ ಹೆಚ್ಚು ಬಾರಿ ಪ್ರಶಸ್ತಿ ಪಡೆದ ದಾಖಲೆ ಮಾಡಿತು. ಭಾರತ ತಂಡದ ಸಾಧನೆಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ