ಇಂದು ಕೂಡ ಲೋಕಸಭಾ ಕಲಾಪ ಕೋಲಾಹಲಕ್ಕೆ ಆಹುತಿಯಾಗಿದ್ದು ಚಳಿಗಾಲದ ಅಧಿವೇಶನ ಕೂಡ ಸಂಪೂರ್ಣವಾಗಿ ವಾಶ್ ಓಟ್ ಆಗುವ ಭಯ ಪ್ರಾರಂಭವಾಗಿದೆ. ಕೇಂದ್ರ ಗೃಹ ಖಾತೆ ಸಹಾಯಕ ಸಚಿವ, ಕಿರಣ್ ರಿಜಿಜು ವಿವಾದ ಮತ್ತು ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ನಡೆಸಿದ ಗಲಾಟೆಗೆ ಪ್ರತಿಯಾಗಿ ಬಿಜೆಪಿ ಆಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣವನ್ನು ಎತ್ತಿಕೊಂಡಿತು.