ಮುಂಬೈ : ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ದೇಶದ ಅತಿದೊಡ್ಡ ಮತ್ತು ಅತ್ಯಂತ ಪ್ರತಿಷ್ಠಿತ ಬಹುಮುಖಿ ತಾಣವಾದ ಜಿಯೋ ವರ್ಲ್ಡ್ ಸೆಂಟರ್ ಅನ್ನು ತೆರೆಯುವುದಾಗಿ ಘೋಷಿಸಿದೆ.
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ 18.5 ಎಕರೆಗಳಷ್ಟು ವಿಸ್ತಾರವಾದ ಪ್ರದೇಶವನ್ನು ಹೊಂದಿದ್ದು, ಭಾರತದ ನಾಗರಿಕರಿಗೆ ವ್ಯಾಪಾರ, ವಾಣಿಜ್ಯ ಮತ್ತು ಸಂಸ್ಕೃತಿಯ ಅನುಭವ ನೀಡುವ ತಾಣವಾಗುವ ಮೂಲಕ ವಿಶ್ವದರ್ಜೆಯ ಗುಣಮಟ್ಟವನ್ನು ಒದಗಿಸಲು ಸಿದ್ಧವಾಗಿದೆ.
ಸಾಂಸ್ಕೃತಿಕ ಕೇಂದ್ರ, ಸಂಗೀತ ಕಾರಂಜಿ, ಉನ್ನತ ಮಟ್ಟದ ರಿಟೇಲ್ ಅನುಭವ, ಕೆಫೆಗಳು ಮತ್ತು ಉತ್ತಮ ಭೋಜನದ ರೆಸ್ಟೋರೆಂಟ್ಗಳು, ಸರ್ವಿಸ್ಡ್ ಅಪಾರ್ಟ್ಮೆಂಟ್ಗಳು ಮತ್ತು ಕಛೇರಿಗಳು, ಸ್ಟೇಟ್-ಆಫ್ ದಿ- ಆರ್ಟ್ ಸೌಲಭ್ಯಗಳನ್ನು ಒಳಗೊಂಡಿರುವ ಭಾರತದ ಮೊದಲ ತಾಣ ಜಿಯೋ ವರ್ಲ್ಡ್ ಸೆಂಟರ್ ಆಗಿರಲಿದೆ.
ಒಬೆರಾಯ್ 360 ಸೇರಿದಂತೆ ಹಲವು ಹೊಸ ಹಾಗೂ ನವೀನ ಜಾಗತಿಕ ಪಾಕಶಾಲೆಯ ಪರಿಕಲ್ಪನೆಯನ್ನು ಕನ್ವೆನ್ಶನ್ ಸೆಂಟರ್ ಒಳಗೊಂಡಿರಲಿದೆ. ಇಂಡಿಯಾ ಆಕ್ಸೆಂಟ್ ನಂಥ ವಿಶ್ವ ದರ್ಜೆಯ ಶಾಪಿಂಗ್ ಅನುಭವ ಮತ್ತು ಐಷಾರಾಮಿ ಬ್ರಾಂಡ್ಗಳು ಇಲ್ಲಿ ಲಭ್ಯವಿರಲಿವೆ.
ಸಾಂಸ್ಕೃತಿಕವಾಗಿ ಮನಸೂರೆಗಳ್ಳುವ ಅನುಭವಗಳ ಸಾಂಸ್ಕೃತಿಕ ಕೇಂದ್ರಬಿಂದುವಾಗಿ, ಕಲಾತ್ಮಕ ಸಮುದಾಯದ ಭಾಗವಾಗಿ ಇದು 2023ರಲ್ಲಿ ಆರಂಭವಾಗಲಿದೆ.