ಊಟಕ್ಕೆಂದು ಮನೆಗೆ ಕರೆಸಿ ಮಗನಿಂದಲೇ ರೇಪ್ ಮಾಡಿಸಿದ ತಾಯಿ!

ಮಂಗಳವಾರ, 20 ಡಿಸೆಂಬರ್ 2022 (09:50 IST)
ಕೋಲ್ಕತ್ತಾ : ಮಹಿಳೆಯೊಬ್ಬಳು ತನ್ನ ಬಳಿ ಬ್ಯೂಟಿಷಿಯನ್ ಕೋರ್ಸ್ ಕಲಿಯುತ್ತಿದ್ದ ಬಾಲಕಿಯನ್ನ ಮನೆಗೆ ಕರೆದು ಊಟ ಹಾಕಿ, ತನ್ನ ಮಗನಿಂದಲೇ ಅತ್ಯಾಚಾರ ಮಾಡಿಸಿರುವ ಅಮಾನವೀಯ ಘಟನೆ ಕೋಲ್ಕತ್ತಾದ ಹರಿದೇವಪುರ ಪ್ರದೇಶದಲ್ಲಿ ನಡೆದಿದೆ.
 
ಎರಡು ತಿಂಗಳ ಹಿಂದೆ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತಾಯಿ ಹಾಗೂ ಕಾಮುಕ ಮಗ ಇಬ್ಬರನ್ನೂ ಕೋಲ್ಕತ್ತಾ ಪೊಲೀಸರು ಬಂಧಿಸಿದ್ದು, ಪೋಕ್ಸೋ ಕೇಸ್ ದಾಖಲಿಸಿದ್ದಾರೆ. 

ಸಂತ್ರಸ್ತ ಬಾಲಕಿ ಆರೋಪಿ ಮಹಿಳೆ ಬಳಿ ಬ್ಯೂಟಿಷಿಯನ್ ಕೋರ್ಸ್ ಕಲಿಯುತ್ತಿದ್ದಳು. ಹೀಗಿರುವಾಗ ಮಹಿಳೆ ಅಕ್ಟೋಬರ್ನಲ್ಲಿ ತನ್ನ ಮನಗೆ ಆಹ್ವಾನಿಸಿದ್ದಳು. ಈ ವೇಳೆ ಆಕೆಗೆ ಊಟ ಕೊಡುವಾಗ ಅದರಲ್ಲಿ ಮಾದಕವಸ್ತು ಮಿಶ್ರಣ ಮಾಡಿಕೊಟ್ಟಿದ್ದಾಳೆ.

ಊಟ ಸೇವಿಸಿದ ಬಾಲಕಿ ಕೆಲ ಕ್ಷಣಗಳಲ್ಲೇ ಪ್ರಜ್ಞೆತಪ್ಪಿದ್ದಾಳೆ. ನಂತರ ಕಾಮುಕ ಮಗ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ