ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.ದೆಹಲಿಯ ತಗ್ಗುಪ್ರದೇಶಗಳಲ್ಲಿ ನೀರು ತುಂಬಿ, ಹಲವು ಪ್ರದೇಶಗಳು ನೀರಿನಲ್ಲೇ ಮುಳುಗಡೆಯಾಗಿವೆ.ಮನೆಗಳಿಗೆ ನುಗ್ಗಿದ ನೀರಿನಿಂದ ನಿವಾಸಿಗಳ ಪರದಾಡುವಂತಾಗಿದೆ. ಅಪಾಯದ ಮಟ್ಟ ಮೀರಿ ಯಮುನೆ ನದಿ ಹರಿಯುತ್ತಿದ್ದು, ಇಂದು ಕೂಡ ಶಾಲಾ-ಕಾಲೇಜುಗಳಿಗೆ ರಜೆ ಷೋಷಿಸಲಾಗಿದೆ. ದೆಹಲಿ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ರಜೆ ನೀಡಲಾಗಿದೆ. ಇವತ್ತು ಕೂಡ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ.. ಇನ್ನು ಕೆಂಪುಕೋಟೆ ಆವರಣ ಹಾಗು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ಸುತ್ತ ನೀರು ನಿಂತಿದೆ.