ಬೆಂಗಳೂರು: ಮದುವೆ ಆಯಿತು ಎಂದ ಮಾತ್ರಕ್ಕೆ ದಾಂಪತ್ಯ ಜೀವನ ಶುರು ಎಂದರ್ಥವಲ್ಲ. ಕೆಲವರು ದಾಂಪತ್ಯ ಜೀವನ ಆರಂಭಿಸಲು ಕೆಲವು ದಿನಗಳನ್ನೇ ತೆಗೆದುಕೊಳ್ಳಬಹುದು. ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡ ಮೇಲೆ ದೈಹಿಕ ಸಂಬಂಧ ಮಾಡಿದರೆ ಹೊಂದಾಣಿಕೆ ಹೆಚ್ಚಬಹುದು.
ಆದರೆ ಸಂಗಾತಿ ಇನ್ನೂ ಹೆಚ್ಚು ಸಮಯ ಬೇಕು ಎನ್ನುತ್ತಾ ಸಹಜೀವನವನ್ನು ತಿಂಗಳಾನುಗಟ್ಟಲೇ ಮುಂದೂಡುತ್ತಾ ಬಂದರೆ ಅಂತಹ ಸಂಬಂಧದಲ್ಲಿ ಬಿರುಕು ಮೂಡಿಯೇ ಮೂಡುತ್ತದೆ.
ಇಂತಹ ಸಂದರ್ಭದಲ್ಲಿ ಸಂಗಾತಿ ಜತೆಗೆ ಮಾತನಾಡಿ ದಾಂಪತ್ಯ ಜೀವನ ಆರಂಭಿಸಲು ಇರುವ ಅಡ್ಡಿ ಏನೆಂದು ತಿಳಿದುಕೊಳ್ಳುವುದು ಮುಖ್ಯ. ಒಂದು ವೇಳೆ ಹೊಂದಾಣಿಕೆ ಕೊರತೆ ಎಂದಾದರೆ ಒಬ್ಬರನ್ನೊಬ್ಬರ ಚಿಕ್ಕಪುಟ್ಟ ಆಸೆ, ಆಕಾಂಕ್ಷೆಗಳನ್ನು ಅರಿತು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಒಂದು ಒಳ್ಳೆ ಸಿನಿಮಾ, ಪ್ರವಾಸ ಇಬ್ಬರ ಮೂಡ್ ಬದಲಾಯಿಸಬಹುದು.
ಬೇಕಿದ್ದರೆ ಮನೆಯ ಇತರ ಸದಸ್ಯರ ಸಹಾಯ ಪಡೆಯಬಹುದು. ಹಾಗಿದ್ದರೂ ಸಮಸ್ಯೆ ಬಗೆಹರಿಯದಿದ್ದಾಗ ಹಿರಿಯರ ಜತೆ ಕೂತು ಮಾತುಕತೆ ಮಾಡುವುದೇ ಒಳ್ಳೆಯದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ