ಅಜೀಂ ಖಾನ್ (21) ಅತ್ಯಾಚಾರ ಮಾಡಿದ ಆರೋಪಿಯಾಗಿದ್ದು, ರಿತಿಕ್ ಕುಶ್ವಾಹಾ (21) ಮತ್ತು ಶ್ಯಾಮ್ ಪ್ರಜಾಪತಿ (22) ಅತ್ಯಾಚಾರಿಗೆ ನೆರವಾದ ಶಿಕ್ಷಕರು. ಸಂತ್ರಸ್ತ ಬಾಲಕಿ 9ನೇ ತರಗತಿ ಓದುತ್ತಿದ್ದು, ಶಾಲೆ ಮುಗಿದ ಬಳಿಕ ಸಂದವಾತಾ ಗ್ರಾಮದ ಬಸ್ ಸ್ಟಾಪಿನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾಗ ಆರೋಪಿ ಅತ್ಯಾಚಾರಿ ಖಾನ್ ಆಕೆಗೆ ಆಮಿಷ ಒಡ್ಡಿ ಶಾಲೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಲು ಮುಂದಾಗಿದ್ದಾನೆ. ಆಗ ಈ ಇಬ್ಬರು ಶಿಕ್ಷಕರು ದಲಿತ ಬಾಲಕಿ ಮತ್ತು ಖಾನ್ ನನ್ನು ಶಾಲಾ ಕೋಣೆಯೊಂದರಲ್ಲಿ ಕೂಡಿ ಹಾಕಿ ಹೊರಗಿನಿಂದ ಬೀಗ ಜಡಿದು ಅತ್ಯಾಚಾರಿಗೆ ನೆರವಾಗಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕಿಯ ಹೆತ್ತವರು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ್ವಯ ಅತ್ಯಾಚಾರಗೈದಿರುವ ಆರೋಪಿ ಅಜೀಂ ಖಾನ್ ಜೊತೆಗೆ ಈತನಿಗೆ ನೆರವಾದ ಇಬ್ಬರು ಶಾಲಾ ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.