ಫೇಸ್‌ಬುಕ್ ಲೈವ್ ಗ್ಯಾಂಗ್ ರೇಪ್: ಮೂವರ ಬಂಧನ

ಶುಕ್ರವಾರ, 27 ಜನವರಿ 2017 (15:11 IST)
ಯುವತಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಮೂವರು ದುರುಳರು, ತಮ್ಮ ಕೀಚಕ ಕೃತ್ಯವನ್ನು ಫೇಸ್‌ಬುಕ್‌ ಗ್ರೂಪ್‌ನಲ್ಲಿ ಲೈವ್ ಪ್ರಸಾರ ಮಾಡಿದ ಹೇಯ ಕೃತ್ಯ ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನಡೆದಿದೆ. ಆರೋಪಿಗಳೀಗ ಪೊಲೀಸರ ವಶದಲ್ಲಿದ್ದು ವಿಚಾರಣೆ ಮುಂದುವರೆದಿದೆ. 

 
ಉಪ್ಪಸಲಾ ಎಂಬ ಅಪಾರ್ಟಮೆಂಟ್‌ನಲ್ಲಿ ಈ ಘೋರ ಕೃತ್ಯ ನಡೆದಿದೆ. ಈ ಕೀಚಕ ಕೃತ್ಯವನ್ನು ಫೇಸ್‌ಬುಕ್‌ನಲ್ಲಿ ನೋಡಿದ ಹಲವರು ಭಾನುವಾರ ಮುಂಜಾನೆ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  
 
ಘಟನೆಯ ಲೈವ್ ದೃಶ್ಯ ಕಂಡ ಗ್ರಾಪ್‌ನ ಅನೇಕ ಸದಸ್ಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆಗಿಳಿದ ಪೊಲೀಸರು ಕೃತ್ಯ ನಡೆಯುತ್ತಿದ್ದ ಅಪಾರ್ಟ್‌‌ಮೆಂಟ್‌‌ಗೆ ಹೋಗಿ ಆರೋಪಿಗಳಿಗೆ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
 
ಘಟನಾ ಸ್ಥಳಕ್ಕೆ ಹೋದ ಪೊಲೀಸರು ರವಿವಾರ 2.30ರ ಸುಮಾರಿಗೆ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. 
 
ಪೀಡಿತ ಮಹಿಳೆ 31 ವರ್ಷದವಳಾಗಿದ್ದು ಆರೋಪಿಗಳು 19ರಿಂದ 25ವರ್ಷದೊಳಗಿನವರು ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ