ಸಿನಿಮಾವನ್ನೂ ಮೀರಿಸುವ ಥ್ರಿಲ್ಲರ್ ಕಹಾನಿ!?

ಮಂಗಳವಾರ, 15 ನವೆಂಬರ್ 2022 (11:45 IST)
ಲಕ್ನೋ : 25ರ ವರ್ಷದ ಯುವಕನೊಬ್ಬ ತನ್ನ ಗೆಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಆಕೆಯ ಖಾಸಗಿ ಭಾಗದಿಂದ ರಕ್ತಸ್ರಾವವಾಗಿದ್ದು,
 
ಮರುದಿನವೇ ಹುಡುಗಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಕೊಲೆ ಹಾಗೂ ಅತ್ಯಾಚಾರ ಆರೋಪದ ಅಡಿಯಲ್ಲಿ 25ರ ಯುವಕನನ್ನು ಬಂಧಿಸಲಾಗಿದೆ.

ಆರೋಪಿ ರಾಜ್ ಗೌತಮ್ ಯುವತಿಯೊಂದಿಗೆ ಸಂಬಂಧ ಹೊಂದಿದ್ದು, ರಾತ್ರಿ ಮೃತ ಹುಡುಗಿಯ ಮನೆಗೆ ಬರುವ ಮುನ್ನ ಎನರ್ಜಿ ಬೂಸ್ಟರ್ ಮಾತ್ರೆ ಸೇವಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಪೊಲೀಸರ ಮಾಹಿತಿ ಪ್ರಕಾರ, ಕಳೆದ ಒಂದು ವರ್ಷದ ಹಿಂದೆ ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದರು. ಅವರ ನಡುವೆ ಅನೇಕ ಸಂದೇಶಗಳು ವಿನಿಮಯವಾಗಿದ್ದವು. ಕೆಲ ದಿನಗಳು ಕಳೆದ ನಂತರ ಯುವಕ ಹುಡುಗಿಯನ್ನು ಬರುವಂತೆ ಕೇಳಿದ್ದಾನೆ. ಮೊದಲು ನಿರಾಕರಿಸಿದ ಆಕೆ ನಂತರ ಬರುವುದಾಗಿ ಒಪ್ಪಿಕೊಂಡಿದ್ದಾಳೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ