ತಿರುಪತಿ ಲಡ್ಡು ಎಂದು ತಿಂದವರ ಕತೆ ಗೋವಿಂದ… ಗೋವಿಂದ: ಕಲಬೆರಕೆ ಮಾಡಿದವರಿಗೆ ದೇವರ ಶಿಕ್ಷೆಯೇನು

Krishnaveni K

ಶುಕ್ರವಾರ, 20 ಸೆಪ್ಟಂಬರ್ 2024 (12:51 IST)
Photo Credit: Facebook
ತಿರುಪತಿ: ತಿಮ್ಮಪ್ಪನ ಪ್ರಸಾದ ಎಂದು ಭಕ್ತಿಯಿಂದ ಇದುವರೆಗೆ ಸೇವಿಸಿದ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು ಸೇರ್ಪಡೆಯಾಗಿತ್ತು ಎಂಬ ಅಂಶ ಈಗ ಭಕ್ತರ ಆಕ್ರೋಶ, ಬೇಸರಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾರ್ವಜನಿಕರು ಸೋಷಿಯಲ್ ಮೀಡಿಯಾದಲ್ಲಿ ಏನು ಹೇಳ್ತಿದ್ದಾರೆ ನೋಡಿ.

ತಿರುಪತಿಗೆ ನಾವು ಹೋದಾಗ ನಮಗೆ ಮಾತ್ರವಲ್ಲ, ನಮ್ಮ ಅಕ್ಕಪಕ್ಕದವರಿಗೂ ಹಂಚಲು ಲಡ್ಡು ಪ್ರಸಾದ ತರುತ್ತೇವೆ. ಇದರ ರುಚಿ ಬೇರೆಲ್ಲೂ ಸಿಗಲ್ಲ. ಅಷ್ಟು ವಿಶೇಷವಾದ ಲಡ್ಡು ಇದು. ಆದರೆ ಕಳೆದ ಜಗನ್ ಸರ್ಕಾರದ ಅವಧಿಯಲ್ಲಿ ಇದಕ್ಕೆ ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗುತ್ತಿತ್ತು ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ.

ಇದೀಗ ಏನೋ ಶುದ್ಧ ದನದ ತುಪ್ಪವನ್ನೇ ಬಳಸಿ ಲಡ್ಡು ತಯಾರಿಸಲಾಗುತ್ತಿದೆಯಂತೆ. ಆದರೆ ಇಷ್ಟು ದಿನ ದೇವರ ಪ್ರಸಾದವೆಂದು ಶುದ್ಧ ಸಸ್ಯಾಹಾರಿಗಳೂ ಈ ಪ್ರಸಾದ ಸ್ವಿಕರಿಸಿದ್ದರೆ ಅವರ ಕತೆ ಗೋವಿಂದ.. ಗೋವಿಂದ.. ಎನ್ನುತ್ತಿದ್ದಾರೆ ನೆಟ್ಟಿಗರು. ದೇವರ ಪ್ರಸಾದವನ್ನೂ ಇನ್ನು ಹೇಗೆ ನಂಬಿ ಸೇವನೆ ಮಾಡುವುದು ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ತಿರುಪತಿ ದೇವರ ಪ್ರಸಾದಕ್ಕೇ ಕಲಬೆರಕೆ ಮಾಡಿದ ತಪ್ಪಿತಸ್ಥರನ್ನು ಆ ವೆಂಕಟೇಶ್ವರ ಸುಮ್ಮನೇ ಬಿಡುತ್ತಾನೆಯೇ? ಅಂತಹವರಿಗೆ ಜೀವನದಲ್ಲಿ ಒಳ್ಳೆಯದಾಗಲ್ಲ ಎಂದು ಕೆಲವರು ಹಿಡಿಶಾಪ ಹಾಕುತ್ತಿದ್ದಾರೆ. ದೇವರ ಪ್ರಸಾದದಲ್ಲೂ ಅಕ್ರಮ ಮಾಡಿರುವ ಇವರೆಲ್ಲಾ ಮನುಷ್ಯರು ಎಂದು ಹೇಳಿಕೊಳ್ಳಲೂ ಅರ್ಹರಲ್ಲ ಎಂದು ನೆಟ್ಟಿಗರು ಹಿಡಿಶಾಪ ಹಾಕುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ