ಬೇರೆಯವರನ್ನು ನಿಮ್ಮ ಮಕ್ಕಳು ಅಪ್ಪಿ ಮುದ್ದಾಡಲು ಬಿಡುವ ಮುನ್ನ ಯೋಚಿಸಿ!

ಬುಧವಾರ, 21 ನವೆಂಬರ್ 2018 (08:43 IST)
ಬೆಂಗಳೂರು: ಮಕ್ಕಳೆಂದರೆ ಯಾರು ತಾನೇ ಮುದ್ದಾಡುವುದಿಲ್ಲ? ಚಿಕ್ಕ ಮಕ್ಕಳನ್ನು ಕಂಡರೆ ತಬ್ಬಿಕೊಂಡು ಕೆನ್ನೆಗೆ ಒಂದು ಮುತ್ತುಕೊಟ್ಟು ಮುದ್ದು ಮಾಡುತ್ತಾರೆ.

ಆದರೆ ಈ ರೀತಿ ನಿಮ್ಮ ಮಕ್ಕಳನ್ನು ಬೇರೆಯವರಿಗೆ ಮಾಡಲು ಬಿಡುವ ಮುನ್ನ ಯೋಚಿಸಿ. ಇತ್ತೀಚೆಗಿನ ದಿನಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಮಕ್ಕಳಲ್ಲಿ ಪೋಷಕರ ಹೊರತಾಗಿ ಬೇರೆಯವರೊಂದಿಗೆ ಎಷ್ಟು ಸಾಮಿಪ್ಯ ಇಟ್ಟುಕೊಳ್ಳಬೇಕು ಎಂಬ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ.

ಬೇರೆಯವರು ನನ್ನ ದೇಹದ ಭಾಗವನ್ನು ಮುಟ್ಟಬಾರದು ಎಂದು ಮಗುವಿನಲ್ಲಿ ಅರಿವು ಮೂಡಿಸಬೇಕೇ ಹೊರತು ಅವರನ್ನು ಅಪ್ಪಿ ಮುದ್ದಾಡಲು ಬೇರೆಯವರಿಗೆ ಅವಕಾಶ ಕೊಡಬಾರದು. ಇದರಿಂದ ಮಕ್ಕಳೂ ತಮ್ಮ ಮೇಲಾದ ದೌರ್ಜನ್ಯವನ್ನು ಅರಿಯಬಹುದು ಮತ್ತು ಅದನ್ನು ನಿಮಗೆ ಹೇಳಬಹುದು. ಹೀಗಾಗಿ ಎಚ್ಚರಿವಿರಿ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ