ಎಡವಟ್ಟು ಹೇಳಿಕೆ ನೀಡಿ ಕ್ಷಮೆ ಯಾಚಿಸಿದ ಕೇಂದ್ರ ಸಚಿವ

ಸೋಮವಾರ, 17 ಸೆಪ್ಟಂಬರ್ 2018 (08:51 IST)
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಬಗ್ಗೆ ಹಗುರವಾಗಿ ಮಾತನಾಡಿ ವಿವಾದಕ್ಕೆ ಗುರಿಯಾಗಿದ್ದ ಕೇಂದ್ರ ಸಚಿವ ರಾಮ್ ದಾಸ್ ಅಥವಾಲೆ ಕ್ಷಮೆ ಯಾಚಿಸಿದ್ದಾರೆ.

ನಾನು ಕೇಂದ್ರ ಸಚಿವ. ಹಾಗಾಗಿ ನನಗೆ ಪೆಟ್ರೋಲ್ ಬೆಲೆ ಏರಿಕೆ ಬಿಸಿ ತಟ್ಟಿಲ್ಲ. ಸಚಿವ ಸ್ಥಾನ ಹೋದರೆ ಮಾತ್ರ ನನಗೆ ನಷ್ಟವಾಗುತ್ತದೆ ಎಂದು ರಾಮ್ ದಾಸ್ ಹೇಳಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.

‘ಮಾಧ್ಯಮ ಮಂದಿ ನನ್ನಲ್ಲಿ ಪೆಟ್ರೋಲ್ ಬೆಲೆ ಏರಿಕೆಯಿಂದ ನಿಮಗೆ ತೊಂದರೆಯಾಗಿದೆಯೇ ಎಂದು ಕೇಳಿದ್ದರು. ಇದಕ್ಕೆ ನನಗೆ ಸಚಿವನಾಗಿರುವುದರಿಂದ ಸರ್ಕಾರವೇ ವಾಹನ ನೀಡಿರುವುದರಿಂದ ಸಮಸ್ಯೆಯಾಗಿಲ್ಲ. ಜನ ಸಾಮಾನ್ಯರಿಗೆ ಮಾತ್ರ ತೊಂದರೆ ಅಂದಿದ್ದೆ ಅಷ್ಟೇ. ಒಂದು ವೇಳೆ ಇದರಿಂದ ಜನರ ಭಾವನೆಗೆ ಬೇಸರವಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ’ ಎಂದು ಸಚಿವರು ಕ್ಷಮೆ ಯಾಚಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ