ಒಂದೇ ತಿಂಗಳಲ್ಲಿ 10 ಕೋಟಿ ಯುಪಿಐ ವಹಿವಾಟು ದಾಖಲೆ
ದೇಶದಲ್ಲಿ 7 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಯುಪಿಐ ಒಂದು ತಿಂಗಳ ಅವಧಿಯಲ್ಲಿ 10 ಕೋಟಿ ಪಾವತಿ ಅಥವಾ ವಹಿವಾಟುಗಳನ್ನು ದಾಖಲಿಸಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಬಿಡುಗಡೆ ಮಾಡಿರುವ ವರದಿ ಪ್ರಕಾರ ಆ.1ರಿಂದ 30ರವರೆಗೆ ದೇಶದಲ್ಲಿ 15.18 ಲಕ್ಷ ಕೋಟಿ ರು. ಮೌಲ್ಯದ 10.24 ಕೋಟಿ ವಹಿವಾಟುಗಳು ದಾಖಲಾಗಿದೆ.31ನೇ ತಾರೀಖಿನ ಮೊದಲೇ ಈ ದಾಖಲೆಯಾಗಿದ್ದು ಇದು ಯುಪಿಐ ವ್ಯವಸ್ಥೆ ಪ್ರಾರಂಭವಾದ 7 ವರ್ಷಗಳಲ್ಲಿ ಇಷ್ಟುಪ್ರಮಾಣದ ವಹಿವಾಟು ಇದೇ ಮೊದಲು. ಅಂದರೆ ಫೋನ್‌ಪೇ, ಗೂಗಲ್‌ಪೇ, ಪೇಟಿಎಂ ಸೇರಿದಂತೆ ಆನ್‌ಲೈನ್‌ನಲ್ಲಿ ಹಣಕಾಸಿನ ವಹಿವಾಟು ನಡೆಸುವ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಒಟ್ಟು 10 ಕೋಟಿ ಬಾರಿ ಪಾವತಿಗಳು ನಡೆದಿವೆ. ಕಳೆದ ಜುಲೈನಲ್ಲಿ 9.96 ಕೋಟಿ ವಹಿವಾಟು ದಾಖಲಾಗಿದ್ದವು. ಈ ಪೈಕಿ ಫೋನ್ ಪೇ ಶೇ.47, ಗೂಗಲ್ ಪೇ ಶೇ.35 ಮತ್ತು ಪೇಟಿಎಂ ಶೇ.13ರಷ್ಟುಪಾಲನ್ನು ಹೊಂದಿದೆ ಎಂದು ತಿಳಿಸಿದೆ.