ಹಸೀನಾ ದೇಶ ತೊರೆದ ಬೆನ್ನಲ್ಲೇ ಭಾರತ- ಬಾಂಗ್ಲಾ ಗಡಿಯಲ್ಲಿ ಹೈ ಅಲರ್ಟ್‌

Sampriya

ಸೋಮವಾರ, 5 ಆಗಸ್ಟ್ 2024 (18:38 IST)
Photo Courtesy X
ನವದೆಹಲಿ: ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಪಲಾಯನಗೈದ ಬೆನ್ನಲ್ಲೇ ಭಾರತದ ಬಾಂಗ್ಲಾ ಗಡಿಯಲ್ಲು ಹೈಲರ್ಟ್ ಘೋಷಣೆ  ಮಾಡಲಾಗಿದೆ.

ನೆರೆಯ ರಾಷ್ಟ್ರವು ಒಂದು ತಿಂಗಳಿನಿಂದಲೂ ಪ್ರತಿಭಟನೆಗಳಿಂದ ಜರ್ಜರಿತವಾಗಿರುವ ಹಿನ್ನೆಲೆಯಲ್ಲಿ ಭಾರತದ ಗಡಿ ಭದ್ರತಾ ಪಡೆ 4,096 ಕಿಮೀ ಭಾರತ-ಬಾಂಗ್ಲಾದೇಶ ಗಡಿಯಲ್ಲಿನ ಎಲ್ಲಾ ಘಟಕಗಳಿಗೆ 'ಹೈ ಅಲರ್ಟ್' ನೀಡಿದೆ.

ಬಿಎಸ್ಎಫ್ ಡಿಜಿ ದಲ್ಜಿತ್ ಸಿಂಗ್ ಚೌಧರಿ, ಹಿರಿಯ ಅಧಿಕಾರಿಗಳು ಭಾರತ-ಬಾಂಗ್ಲಾದೇಶದ ಗಡಿ ಭದ್ರತೆಯನ್ನು ಪರಿಶೀಲಿಸಲು ಕೋಲ್ಕತ್ತಾ ತಲುಪಿದ್ದಾರೆ.

ಹಿಂಸಾತ್ಮಕ ಪ್ರತಿಭಟನೆಗಳ ಮಧ್ಯೆ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಸೋಮವಾರ ರಾಜೀನಾಮೆ ನೀಡಿದರು ಮತ್ತು ತಮ್ಮ ಸಹೋದರಿಯೊಂದಿಗೆ ರಾಜಧಾನಿ ಢಾಕಾದಿಂದ "ಸುರಕ್ಷಿತ ಸ್ಥಳ" ಕ್ಕೆ ತೆರಳಿದರು.

ಹಿಂಸಾಚಾರ ಪೀಡಿತ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಸೇನೆ, "ಪ್ರಧಾನಿ ಹಸೀನಾ ರಾಜೀನಾಮೆ ನೀಡಿದ್ದಾರೆ, ದೇಶವನ್ನು ನಡೆಸಲು ಮಧ್ಯಂತರ ಸರ್ಕಾರ. ನಾವು ದೇಶಕ್ಕೆ ಶಾಂತಿಯನ್ನು ಹಿಂದಿರುಗಿಸುತ್ತೇವೆ. ಹಿಂಸಾಚಾರವನ್ನು ನಿಲ್ಲಿಸುವಂತೆ ನಾವು ನಾಗರಿಕರನ್ನು ಕೇಳುತ್ತೇವೆ. ಕಳೆದ ಕೆಲವು ವಾರಗಳಿಂದ ನಡೆದ ಎಲ್ಲಾ ಹತ್ಯೆಗಳ ಬಗ್ಗೆ ನಾವು ತನಿಖೆ ನಡೆಸುತ್ತೇವೆ" ಎಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ