ಹಿರಿಯ ಅಧಿಕಾರಿಯೊಬ್ಬ ಇಬ್ಬರು ಮಹಿಳಾ ಉದ್ಯೋಗಿಗಳಿಗೆ ಮಾಡಿದ್ದೇನು?
ಬುಧವಾರ, 28 ಅಕ್ಟೋಬರ್ 2020 (07:22 IST)
ನವದೆಹಲಿ : ಇಬ್ಬರು ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೆಟ್ ಕಮ್ಯುನಿಕೇಷನ್ ಮತ್ತು ಪಬ್ಲಿಕ್ ರೆಲೇಶನ್ ಟೀಮ್ ನ ಹಿರಿಯ ಅಧಿಕಾರಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ ಘಟನೆ ಗೋಏರ್ ನಡೆಸಿದ ಆಂತರಿಕ ತನಿಖೆಯಲ್ಲಿ ತಿಳಿದುಬಂದಿದೆ.
ವಿದೇಶ ಪ್ರವಾಸದ ವೇಳೆ ಅಧಿಕಾರಿ ಮಹಿಳೆಯರ ಜೊತೆ ಈ ರೀತಿಯಾಗಿ ವರ್ತಿಸಿದ್ದಾರೆ. ಈ ಬಗ್ಗೆ ಇಬ್ಬರು ಮಹಿಳೆಯರು ಹಿರಿಯ ಅಧಿಕಾರಿಯ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಈ ಬಗ್ಗೆ ವಿಮಾನಯಾನ ಆಂತರಿಕ ಸಮಿತಿಯು ತನಿಖೆ ನಡೆಸಿ ಆತನನ್ನು ತಪ್ಪಿತಸ್ಥರೆಂದು ಕಂಡುಹಿಡಿದಿದ್ದಾರೆ. ಹಾಗೇ ಮಹಿಳಾ ನೌಕರರಿಬ್ಬರೂ ಈಗಾಗಲೇ ವಿಮಾನಯಾನ ಸಂಸ್ಥೆಗೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.