ಮಧ್ಯಪ್ರದೇಶ: ಕ್ರಿಸ್ಮಸ್ ಹಬ್ಬದ ಹಿನ್ನೆಲೆ ಸಂತಾ ಕ್ಲಾಸ್ ವೇಷವನ್ನು ಧರಿಸಿ ಝೊಮಾಟೋ ಡೆಲಿವರಿ ಮಾಡುತ್ತಿದ್ದ ವ್ಯಕ್ತಿ ಮೇಲೆ ಕೆಲ ಬಲಪಂಥಿಯವರು ಒತ್ತಾಯ ಪೂರ್ವಕವಾಗಿ ಆತನ ವೇಷಭೂಷಣವನ್ನು ತೆಗೆದುಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಂತಾ ಕ್ಲಾಸ್ ವೇಷಭೂಷಣವನ್ನು ಧರಿಸಿ ಫುಡ್ ಡೆಲಿವರಿ ಮಾಡುತ್ತಿರುವುದನ್ನು ನೋಡಿ ಬಲಪಂಥಿಯವರು ಆಕ್ರೋಶಗೊಂಡಿದ್ದಾರೆ. ಈ ವೇಳೆ ಆತನನ್ನು ತಡೆದು ವೇಷಭೂಷಣವನ್ನು ತೆಗೆದುಹಾಕುವಂತೆ ಹೇಳಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ನೀವ್ಯಾಕೆ ಕುಂಕುಮ ಹಂಚಿಕೊಂಡು ಡೆಲಿವರಿಗೆ ಹೋಗಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಸಂತಾಕ್ಲಾಸ್ ವೇಷಭೂಷಣ ಹಾಕಿದ್ದ ಅರ್ಜುನ್ ಮೇಲೆ ಕಿರುಕುಳ ಮತ್ತು ಬೆದರಿಕೆ ಹಾಕಿದ್ದಾರೆ.