ಝೆಲೆನ್ಸ್ಕಿಗೆ ಮೋದಿ ಸಲಹೆ ಏನು?

ಸೋಮವಾರ, 7 ಮಾರ್ಚ್ 2022 (15:03 IST)
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಸಮಾಲೋಚನೆ ನಡೆಸಿದರು.

ಅಧ್ಯಕ್ಷ ಝೆಲೆನ್ಸ್ಕಿ ಅವರು ಸಂಘರ್ಷದ ಪರಿಸ್ಥಿತಿ, ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಮಾತುಕತೆಗಳ ಬಗ್ಗೆ ಮೋದಿ ಅವರಿಗೆ ವಿಸ್ತøತವಾಗಿ ವಿವರಿಸಿದರು.

ಉಕ್ರೇನ್ನಿಂದ 20,000ಕ್ಕೂ ಅಧಿಕ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಉಕ್ರೇನಿಯನ್ ಅಧಿಕಾರಿಗಳಿಗೆ ಮೋದಿ ಅವರು ಧನ್ಯವಾದ ಸಲ್ಲಿಸಿದರು.

ಉಕ್ರೇನ್ನಲ್ಲಿ ಇನ್ನೂ ಉಳಿದಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆತೆಯ ಬಗ್ಗೆ ತೀವ್ರ ಕಾಳಜಿಯನ್ನು ವ್ಯಕ್ತಪಡಿಸಿದರು. ಅವರ ತ್ವರಿತ ಮತ್ತು ಸುರಕ್ಷಿತ ಸ್ಥಳಾಂತರ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ