ಬಜೆಟ್‌, ಬ್ರೀಫ್‌ಕೇಸ್‌ಗೂ ಏನು ಸಂಬಂಧ?

ಸೋಮವಾರ, 24 ಜನವರಿ 2022 (12:29 IST)
ಬಜೆಟ್ ಮಂಡನೆ ದಿನ ಬಜೆಟ್ ಪ್ರತಿಯನ್ನು ಹಿಡಿದುಕೊಂಡು ಹಣಕಾಸು ಸಚಿವರು ಸಂಸತ್ತಿಗೆ ಬರುವುದು ಹಲವು ದಶಕಗಳಿಂದ ನಡೆದು ಬಂದ ರೂಢಿ.
 
ಬ್ರೀಫ್ಕೇಸ್ನಲ್ಲಿ ಬಜೆಟ್ ಪ್ರತಿ ಇಟ್ಟುಕೊಂಡು ಬರುವ ಸಂಪ್ರದಾಯ ಭಾರತಕ್ಕೆ ಇಂಗ್ಲೆಂಡ್ನಿಂದ ಬಳುವಳಿ. ಇಂಗ್ಲೆಂಡಿನ ಬಜೆಟ್ ಮುಖ್ಯಸ್ಥರಾಗಿದ್ದ ವಿಲಿಯಂ ಗ್ಲಾಡ್ಸ್ಟೋನ್ ಅವರು ಈ ಸಂಪ್ರದಾಯವನ್ನು ಆರಂಭಿಸಿದ್ದರು. ಅವರ ಬಜೆಟ್ ಭಾಷಣ ಭಾರೀ ಉದ್ದವಾಗಿ ಇದ್ದಿದ್ದರಿಂದ, ಹಲವು ಪುಟಗಳಲ್ಲಿ ಭಾಷಣವನ್ನು ಮುದ್ರಿಸಲಾಗುತ್ತಿತ್ತು.

2019ರ ವರೆಗೂ ಭಾರತದಲ್ಲಿ ಬಜೆಟ್ ಪ್ರತಿಯನ್ನು ಬ್ರೀಫ್ಕೇಸ್ನಲ್ಲಿಯೇ ತರಲಾಗುತ್ತಿತ್ತು. 2019ರಲ್ಲಿ ಮೊದಲ ಬಾರಿಗೆ ಬಜೆಟ್ ಮಂಡಿಸಿದ್ದ ನಿರ್ಮಲಾ ಸೀತಾರಾಮನ್, ಬಜೆಟ್ ಪ್ರತಿಗಳನ್ನು ಸಾಂಪ್ರದಾಯಿಕ ಬ್ರೀಫ್ಕೇಸ್ನಲ್ಲಿ ತರುವ ಬದಲು, ಕೆಂಪು ಬಟ್ಟೆಯಲ್ಲಿ (ಬಹೀ ಖಾತಾ) ಸುತ್ತಿಕೊಂಡು ಬಂದಿದ್ದರು.

2021-22 ನೇ ವರ್ಷದ ಕೆಂಪು ಹ್ಯಾಂಡ್ ಬ್ಯಾಗ್ನಲ್ಲಿ ಬಜೆಟ್ ಪ್ರತಿ ಅಡಕವಾಗಿರುವ ಟ್ಯಾಬ್ಲೆಟ್ ಇಟ್ಟುಕೊಂಡು ಬಂದಿದ್ದರು. ಆ ಮೂಲಕ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಡಿಜಿಟಲ್ ಬಜೆಟ್ ಮಂಡನೆ ಮಾಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ