ಗರ್ಲ್ ಫ್ರೆಂಡ್ ನ್ನು ಚುಡಾಯಿಸಿದ ಸ್ನೇಹಿತನಿಗೆ ಬಾಲಕರು ಮೂವರು ಸೇರಿ ಮಾಡಿದ್ದನ್ನು ಕೇಳಿದರೆ ಬೆಚ್ಚಿ ಬೀಳ್ತೀರಾ
ಸೋಮವಾರ, 1 ಅಕ್ಟೋಬರ್ 2018 (08:38 IST)
ಪಾಟ್ನಾ : ಗರ್ಲ್ ಫ್ರೆಂಡ್ ನ್ನು ಚುಡಾಯಿಸಿದಕ್ಕೆ 15 ವರ್ಷದ ಬಾಲಕನೊಬ್ಬನನ್ನು ಆತನ ಮೂವರು ಸಹಪಾಠಿಗಳೇ ಅಪಹರಿಸಿ ಕೊಲೆ ಮಾಡಿದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.
10ನೇ ತರಗತಿಯಲ್ಲಿ ಓದುತ್ತಿದ್ದ ಸತ್ಯಂ ಮೃತ ವಿದ್ಯಾರ್ಥಿಯಾಗಿದ್ದು ಈತ ಪಾಟ್ನಾ ವೈದ್ಯರೊಬ್ಬರ ಮಗ. ಈತ ಶಾಲೆಯಲ್ಲಿರುವ ಎಲ್ಲ ಹುಡುಗಿಯರನ್ನೂ ಚುಡಾಯಿಸುತ್ತಿದ್ದ. ಅದೇ ರೀತಿ, ತನ್ನ ಗರ್ಲ್ ಫ್ರೆಂಡನ್ನೂ ಚುಡಾಯಿಸಿ ಹಿಂಸೆ ನೀಡುತ್ತಿದ್ದ ಎಂದು ಬಾಲಕನೊಬ್ಬ ತನ್ನ ಇಬ್ಬರು ಸ್ನೇಹಿತರು ಸೇರಿ ಆತನನ್ನು ಕಿಡ್ನಾಪ್ ಮಾಡಿ ಆತನಿಗೆ ಮತ್ತು ಬರುವ ಔಷಧ ನೀಡಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಮೂರು ದಿನಗಳ ಹಿಂದೆ ಕೋಚಿಂಗ್ ಕ್ಲಾಸ್ನಿಂದ ಮನೆಗೆ ವಾಪಸಾಗುವಾಗ ಕಾಣೆಯಾಗಿದ್ದ ಸತ್ಯಂ ಕುರಿತು ಆತನ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಜೊತೆಗೆ, 50 ಲಕ್ಷ ರೂಪಾಯಿ ನೀಡಿದರೆ ಮಾತ್ರ ಸತ್ಯಂನನ್ನು ಬಿಡುವುದಾಗಿ ಅಪಹರಣಕಾರರು ಬೆದರಿಕೆವೊಡ್ಡಿದ್ದರು ಎಂದೂ ದೂರಿನಲ್ಲಿ ತಿಳಿಸಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಮೃತ ವಿದ್ಯಾರ್ಥಿಯ ಮೂವರು ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದಾಗ ಅವರೇ ಕೊಲೆ ಮಾಡಿರುವುದಾಗಿ ಬಾಯಿಬಿಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ