ಸಚಿವೆ ಉಮಾಭಾರತಿ ಚುನಾವಣೆಯಿಂದ ದೂರ ಉಳಿಯಲು ಕಾರಣವೇನು ಗೊತ್ತಾ…?
ಮಂಗಳವಾರ, 13 ಫೆಬ್ರವರಿ 2018 (07:46 IST)
ಉತ್ತರಪ್ರದೇಶ : ಅನಾರೋಗ್ಯದ ಕಾರಣದಿಂದ ಚುನಾವಣಾ ಸ್ಪರ್ಧೆಯಿಂದ ದೂರ ಉಳಿಯಲು ಕೇಂದ್ರ ಕುಡಿಯುವ ನೀರು, ನೈರ್ಮಲ್ಯ ಖಾತೆ ಸಚಿವೆ ಉಮಾಭಾರತಿ ಅವರು ತೀರ್ಮಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರಪ್ರದೇಶದ ಝಾನ್ಸಿ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಅವರು ತೀವ್ರವಾದ ಬೆನ್ನು ನೋವು ಹಾಗೂ ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಚುನಾವಣಾ ಸ್ಪರ್ಧಿಸುವುದಿಲ್ಲವೆಂದು ಕೇಂದ್ರ ಕುಡಿಯುವ ನೀರು, ನೈರ್ಮಲ್ಯ ಖಾತೆ ಸಚಿವೆ ಉಮಾಭಾರತಿ ಸ್ಪಷ್ಟನೆ ನೀಡಿದ್ದಾರೆ. ಆದರೆ ಚುನಾವಣಾ ಸ್ಪರ್ಧಿಸದಿದ್ದರೂ ಬಿಜೆಪಿ ಸಂಘಟನೆಗೆ ಸಿದ್ಧವಿರುವುದಾಗಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ