ವೃದ್ಧಾಶ್ರಮ ಕಂಟೈನ್ಮೆಂಟ್ ಝೋನ್ ಆಗಿದ್ದಾದ್ರು ಯಾಕೆ?

ಮಂಗಳವಾರ, 30 ನವೆಂಬರ್ 2021 (11:38 IST)
ಮುಂಬೈ  :  62 ನಿವಾಸಿಗಳಿಗೆ ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆ ಮಹಾರಾಷ್ಟ್ರದ ಥಾಣೆ ಜಿಲ್ಲಾಡಳಿತ ವೃದ್ಧಾಶ್ರಮವನ್ನು ಕಂಟೈನ್ಮೆಂಟ್ ಝೋನ್ ಮಾಡಿದೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ‘ಮಾತೋಶ್ರೀ ವೃದ್ಧಾಶ್ರಮ’ದ 62 ನಿವಾಸಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಈ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ ಎಂದು ಜಿಲ್ಲಾಡಳಿತ ಘೋಷಿಸಿದೆ. ಪ್ರಸ್ತುತ ಈ 62 ನಿವಾಸಿಗಳನ್ನು ಹತ್ತಿರದ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಆಸ್ಪತ್ರೆಗೆ ದಾಖಲಾದ 62 ರೋಗಿಗಳಲ್ಲಿ 37 ಪುರುಷರು ಮತ್ತು 25 ಮಹಿಳೆಯರು. ಇವರಲ್ಲಿ 41 ಜನರು ಅಸ್ವಸ್ಥ ಸ್ಥಿತಿಯಲ್ಲಿದ್ದಾರೆ. ಎಲ್ಲ ರೋಗಿಗಳನ್ನು ನಾವು ಗಮನಿಸುತ್ತಿದ್ದು, ಆಸ್ಪತ್ರೆಯ ವೈದ್ಯಕೀಯ ತಂಡವು ಹಗಲು-ರಾತ್ರಿ ಅವರನ್ನು ನೋಡಿಕೊಳ್ಳುತ್ತಿದೆ. 10 ದಿನಗಳ ಕಾಲ ಇವರನ್ನು ಆಸ್ಪತ್ರೆಯಲ್ಲಿ ಇರಿಸಲಾಗುವುದು.
ವೃದ್ಧಾಶ್ರಮದಿಂದ ಇತರ ಐದು ಶಂಕಿತ ಸೋಂಕಿತರನ್ನು ಆಸ್ಪತ್ರೆಯ ಸಾಮಾನ್ಯ ವಾರ್ಡ್ಗೆ ದಾಖಲಿಸಲಾಗಿದೆ. 15 ಜನರ ಪರೀಕ್ಷಾ ಮಾದರಿಗಳನ್ನು ಜಿನೋಮ್ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿ ತಿಳಿಸಿದರು. 
ಜಿಲ್ಲಾಡಳಿತವು ಪ್ರಸ್ತುತ ಭಿವಂಡಿ ತಹಸಿಲ್ನ ಸೊರ್ಗಾಂವ್ ಗ್ರಾಮವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿದೆ. ಹಿರಿಯ ನಾಗರಿಕರು ವೃದ್ಧಾಶ್ರಮದಲ್ಲಿ ಒಟ್ಟಿಗೆ ಓಡಾಡುವುದು, ತಿನ್ನುವುದು ಮತ್ತು ಹಲವು ಚಟುವಟಿಕೆಗಳನ್ನು ಒಟ್ಟಿಗೆ ನಡೆಸುವುದರಿಂದ ಸೋಂಕು ಇವರಿಗೆ ಬೇಗ ಹರಡಿಕೊಂಡಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ