ಮಾಷರ್ಲ್ ಗಳ ಹೊಸ ಸಮವಸ್ತ್ರದ ಬಗ್ಗೆ ವ್ಯಾಪಕ ಟೀಕೆ; ನಿರ್ಧಾರ ಮರುಪರಿಶೀಲನೆಗೆ ಆದೇಶಿಸಿದ ಉಪ ರಾಷ್ಟ್ರಪತಿ

ಬುಧವಾರ, 20 ನವೆಂಬರ್ 2019 (08:53 IST)
ನವದೆಹಲಿ : ರಾಜ್ಯಸಭೆ ಮಾಷರ್ಲ್ ಗಳ ಹೊಸ ಸಮವಸ್ತ್ರದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು, ಭಾರತೀಯ ಸೇನೆಯ ಮಾಜಿ ಮುಖ್ಯಸ್ಥರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.




ಕಲಾಪದ ವೇಳೆ ಮಾಷರ್ಲ್ ಗಳಿಗೆ ಸಾಂಪ್ರದಾಯಿಕ ಉಡುಗೆ ಬಂದ್ ಗಲಾ ಮತ್ತು ಪೇಟದ ಬದಲು ಮಿಲಿಟರಿ ರೀತಿಯ ಸಮವಸ್ತ್ರ ನೀಡಲಾಗಿತ್ತು. ಇದಕ್ಕೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ಅಲ್ಲದೇ ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ವೇದ್ ಮಲಿಕ್ ಟ್ವೀಟ್ ಮೂಲಕ, ಸೇನೆಯ ಸಮವಸ್ತ್ರ ನಕಲು ಮಾಡುವುದು ಕಾನೂನು ಬಾಹಿರ. ಈ ಬಗ್ಗೆ ಉಪ ರಾಷ್ಟ್ರಪತಿ ಕಚೇರಿ, ರಾಜ್ಯಸಭೆ, ಹಾಗೂ ಕೇಂದ್ರ ರಕ್ಷಣಾ ಸಚಿವರು ಗಮನ ಹರಿಸಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ನಿರ್ಧಾರ ಮರುಪರಿಶೀಲನೆಗೆ ಆದೇಶಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ