ಮಾವನ ಮನೆಗೆ ಪತ್ನಿಯೊಂದಿಗೆ ಪತಿ ತೆರಳುತ್ತಿರುವ ಸಂದರ್ಭದಲ್ಲಿ ಪತ್ನಿಯ ಪ್ರಿಯಕರ , ಆಕೆಯ ಪತಿಯ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಿದ್ದಾರೆ. ನಂತರ ಪತ್ನಿಯೂ ಪ್ರಿಯಕರನ ಜೊತೆ ಸೇರಿ ಕುತ್ತಿಗೆ ಮತ್ತು ಎದೆಯ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾಳೆ ನಂತರ ಆತ ಮೂರ್ಛೆ ಹೋದಾಗ ಸತ್ತಿದ್ದಾನೆಂದು ಭಾವಿಸಿ ಆತನ ದೇಹವನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದಾರೆ.