ಲಕ್ನೋ: ಗಂಡನನ್ನು ಮರ್ಡರ್ ಮಾಡಿದ್ದಲ್ಲದೆ ದೇಹವನ್ನು ಪೀಸ್ ಪೀಸ್ ಮಾಡಿದ್ದೇನು ಎಂದು ತಿಳಿದರೆ ನಿಮ್ಮ ಎದೆ ಝಲ್ಲೆನಿಸುತ್ತದೆ. ಇದು ನಡೆದಿರುವುದು ಉತ್ತರ ಪ್ರದೇಶದಲ್ಲಿ.
ಉತ್ತರ ಪ್ರದೇಶದ ಬ್ರಹ್ಮಪುರಿಯ ಇಂದಿರಾ ನಗರದಲ್ಲಿ ಘಟನೆ ನಡೆದಿದೆ. ಪತ್ನಿಗೆ ಬೇರೊಬ್ಬನ ಜೊತೆ ಅಫೇರ್ ಇತ್ತು. ಆದರೆ ಇದಕ್ಕೆ ಪತಿ ಅಡ್ಡಿಯಾಗಿದ್ದ. ಹೀಗಾಗಿ ತನ್ನ ದಾರಿಗೆ ಅಡ್ಡವಾಗಿದ್ದ ಪತಿಯನ್ನು ಪ್ರಿಯಕರ ಸಾಹಿಲ್ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಾಳೆ. ಬಳಿಕ ದೇಹವನ್ನು ಪೀಸ್ ಪೀಸ್ ಮಾಡಿ ಡ್ರಮ್ ಒಳಗೆ ತುಂಬಿ ಅದರ ಮೇಲೆ ಸಿಮೆಂಟ್ ಹಾಕಿ ಮುಚ್ಚಿಟ್ಟಿದ್ದಳು.
ಪತಿ ಸೌರಭ್ (29) ಹಡಗು ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ. 27 ವರ್ಷದ ಪತ್ನಿ ಮುಸ್ಕಾನ್ ಪ್ರಿಯಕರ ಸಾಹಿಲ್ (25) ಜೊತೆ ಸೇರಿ ಕೃತ್ಯವೆಸಗಿದ್ದಾಳೆ. ಬಳಿಕ ಪತಿಯ ಮೊಬೈಲ್ ನಿಂದ ಆತನೇ ಮೆಸೇಜ್ ಮಾಡುವಂತೆ ಆತನ ಕುಟುಂಬಸ್ಥರಿಗೆ ಮೆಸೇಜ್ ಕಳುಹಿಸಿ ನಾಟಕವಾಡಿದ್ದಳು.
ಆದರೆ ಸೌರಭ್ ಬಗ್ಗೆ ಅನುಮಾನಗೊಂಡು ಕುಟುಂಬಸ್ಥರು ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದರು. ತನಿಖೆ ನಡೆಸಿದಾಗ ಪತ್ನಿಯ ನಾಟಕ ಬಯಲಾಗಿದೆ. ಇದೀಗ ಇಬ್ಬರನ್ನೂ ಬಂಧಿಸಲಾಗಿದೆ.